ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಹತ್ತಿರದ ಮಾಂಜರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಾಟಿಕೊಂಡು ಹೋಗುವಾಗ ವ್ಯಕ್ತಿಯೊಬ್ಬರು ನದಿಯಲ್ಲಿ ಕೊಚ್ಚಿ ಹೋದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಲಖಣಗಾಂವ ಗ್ರಾಮದ ಜ್ಞಾನೇಶ್ವರ ಸುರುಪರಾವ ಚಾಂದಿವಾಲೆ ಎಂಬುವವರೇ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ. ಇವರು ಬುಧವಾರ ಮುಂಜಾನೆ ನದಿಯ ಸೇತುವೆ ಮೇ ಲಿಂದ ನದಿ ದಾಟಿಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಜಾರಿಕೊಂಡು ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದಾರೆ.
PublicNext
09/09/2021 08:08 pm