ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳ ಮನೆಗೆ ಬಾಗಿನ ಕೊಟ್ಟು ವಾಪಸ್ಸಾಗುತ್ತಿದ್ದಾಗ ಅಪಘಾತ: ತಂದೆ-ಮಗಳು ಸಾವು

ಚಿಕ್ಕಮಗಳೂರು: ಮಗಳ ಮನೆಗೆ ಬಾಗಿನ ಕೊಟ್ಟು ವಾಪಸ್ ಬರುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ಅಪ್ಪ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ನಡೆದಿದೆ.

ಮುಗುಳವಳ್ಳಿ ಗ್ರಾಮದ ನಿವಾಸಿ ಜಯಣ್ಣ (58), ಅವರ ಮಗಳು ರಕ್ಷಿತಾ (19) ಮೃತ ದುರ್ದೈವಿಗಳು. ಹಿರಿಯ ಮಗಳಿಗೆ ಬಾಗಿನ ಕೊಡಲು ಜಯಣ್ಣ ಅವರು ಪುತ್ರಿ ರಕ್ಷಿತಾ ಜೊತೆಗೆ ಪಿಳ್ಳೇನಹಳ್ಳಿಗೆ ಹೋಗಿದ್ದರು. ಅಲ್ಲಿಂದ ಟಿವಿಎಸ್ ಬೈಕ್‌ನಲ್ಲಿ ವಾಪಸ್ ಬರುವಾಗ ಬೈಕ್ ಹಾಗೂ ಗ್ಯಾಸ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಅಪ್ಪ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

09/09/2021 03:14 pm

Cinque Terre

41.04 K

Cinque Terre

0

ಸಂಬಂಧಿತ ಸುದ್ದಿ