ಗಂಡ ಹೆಂಡತಿ ಮಧ್ಯೆ ಸಣ್ಣಪುಟ್ಟ ಜಗಳ, ಮನಸ್ತಾಪ ಸಹಜ ಆದರೆ ಈ ದಂಪತಿ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವುದು ಮಾತ್ರ ಭಯಾನಕ. ಹೌದು ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಿಕನ್ ಮಾಡಲು ಹೇಳುತ್ತಾನೆ. ಅದಕ್ಕೆ ಅವಳು ಒಪ್ಪಲಿಲ್ಲ ಇದೇ ಕಾರಣಕ್ಕೆ ಕೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಆಗಸ್ಟ್ 23 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಸಮರಟೋಲ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಪೌಂಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಪ್ರಾರಂಭವಾಗಿದೆ. ಆರೋಪಿಯನ್ನು ಕಮಲೇಶ್ ಕೋಲ್ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರ ಹೆಸರು ರಮಾಂಬೈ ಕೋಲ್. ಸದ್ಯ ಆರೋಪಿ ಅಂದರ ಆಗಿದ್ದಾನೆ.
PublicNext
02/09/2021 07:31 pm