ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ವೆ ಆಗುವುದಾಗಿ ಒಬ್ಬರಲ್ಲ, ಇಬ್ಬರಲ್ಲ 35 ಯುವತಿಯರಿಗೆ ವಂಚಿಸಿದ ಭೂಪ!

ಬೆಂಗಳೂರು: ಮದುವೆ ಆಗುವುದಾಗಿ ಒಬ್ಬರಲ್ಲ, ಇಬ್ಬರಲ್ಲ 35 ಯುವತಿಯರಿಗೆ ವಂಚಿಸಿ ಅವರಿಂದ 70 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪೀಕಿದ ಭೂಪ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೌದು. ವಿಜಯಪುರ ಮೂಲದ ಜಗನ್ನಾಥ್ ಸಜ್ಜನ್ ಬಂಧಿತ ಆರೋಪಿ. ಜಗನ್ನಾಥ್ ಎಂಟು ವರ್ಷಗಳ ಹಿಂದೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಕಳೆದ ಎರಡು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಶಾದಿ ಡಾಟ್‌ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದ. ಹತ್ತಾರು ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದೋನು 90ಕ್ಕೂ ಹೆಚ್ಚು ಯುವತಿಯರನ್ನು ಕಾಂಟ್ಯಾಕ್ಟ್ ಮಾಡಿದ್ದ. ಈ ಪೈಕಿ ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ಮಂಗಳೂರಿನ ಸುಮಾರು 35ಕ್ಕೂ ಹೆಚ್ಚು ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆ ಪೀಕಿ ವಂಚಿಸಿದ್ದ.

35 ವರ್ಷ ಮೇಲ್ಪಟ್ಟ ಹಾಗೂ ವಿಚ್ಚೇದಿತ ಯುವತಿಯರನ್ನೇ ಟಾರ್ಗೆಟ್ ಮಾಡಿ ಬಲೆಗೆ ಬೀಳಿಸುತ್ತಿದ್ದ. ಯುವತಿಯರು ಎಷ್ಟೇ ಸಲುಗೆಯಿಂದ ನಡೆದುಕೊಂಡರೂ ಯುವತಿಯರನ್ನ ಜಗನ್ನಾಥ್ ಟಚ್ ಕೂಡ ಮಾಡ್ತಿರಲಿಲ್ವಂತೆ. ನೀನೆ ನನಗೆ ತಾಯಿ ನೀನೇ ನನಗೆ ಮಗಳಿದ್ದಂತೆ. ಆದಷ್ಟು ಬೇಗ ಮದುವೆ ಆಗೋಣ ಅಂತ ನಂಬಿಸ್ತಿದ್ದ. ಒಂದೆರಡು ದಿನಗಳ ಟ್ರಿಪ್ ಮುಗಿಸಿದ ನಂತ್ರ ಆಕ್ಸಿಡೆಂಟ್ ಆಗಿದೆ. ಮದುವೆಗೂ ಮುಂಚೆ ಮನೆ ಕಟ್ಟುತ್ತಿದ್ದೇನೆ. ಅಂತೆಲ್ಲ ಕಥೆ ಕಟ್ಟಿ ಲಕ್ಷಗಟ್ಟಲೇ ಹಣ ಕೀಳ್ತಿದ್ದ. ಹಣ ಕೊಡ್ತಿದ್ದಂತೆ ಹುಡ್ಗಿ ನಂಬರ್ ಬ್ಲಾಕ್ ಮಾಡಿ ಸಿಮ್ ಕಾರ್ಡ್ ಡೆಸ್ಟ್ರಾಯ್ ಮಾಡ್ತಿದ್ದ.

ಉಳ್ಳಾಲದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಜಗನ್ನಾಥ್ ವಾರಕ್ಕೊಮ್ಮೆ ಮಾತ್ರ ಮನೆಯಲ್ಲಿ ಇರುತ್ತಿದ್ದ. ವಾರದ ಆರು ದಿನ ಯುವತಿಯರ ಜೊತೆ ಡೇಟಿಂಗ್ ಮಾಡ್ತಿದ್ದ. ಆರೋಪಿ ಕಳೆದ ವರ್ಷ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ವಂಚಿಸಿ ಅರೆಸ್ಟ್ ಆಗಿದ್ದ. ಜೈಲಿನಿಂದ ಹೊರಬಂದ ನಂತರ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿ ಕಳೆದ ಎರಡು ತಿಂಗಳಲ್ಲೆ 15ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ.

ಜಗನ್ನಾಥ್‌ನನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.

Edited By : Vijay Kumar
PublicNext

PublicNext

01/09/2021 09:41 pm

Cinque Terre

48.16 K

Cinque Terre

4