ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದ ಚಾಲಾಕಿ ಕಳ್ಳರು ಅಂದರ್.!

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

ಯಾದಗಿರಿ: ವ್ಯಕ್ತಿಯೊಬ್ಬ ಬ್ಯಾಂಕ್ ನಿಂದ 3 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಇಟ್ಟು ಕೊಂಡು ಹೋಗುವಾಗ ಖತರ್ನಾಕ್ ಕಳ್ಳರು ಯಾಮಾರಿಸಿ ಹಣ ಎಗರಿಸಿಕೊಂಡು ಹೋಗಿದ್ದವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ನಗರದ ವಡ್ಡರಗಲ್ಲಿ ಹತ್ತಿರ ಖದೀಮರು ಅವರನ್ನು ನಿಲ್ಲಿಸಿ ನಿಮ್ಮ ಹಣ ಬಿದ್ದಿದೆ ನೋಡಿ ಎಂದಾಗ ಆ ವ್ಯಕ್ತಿ ಕೆಳಗೆ ಬಿದ್ದ ಚಿಲ್ಲರೆ ಹಣವನ್ನು ತಗೆದುಕೊಳ್ಳುವಾಗ ಬೈಕ್ ನಲ್ಲಿನ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಇನ್ನು ಇಲಕಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂತರಾಜ್ಯ ಆರೋಪಿಗಳಾದ ತಮಿಳನಾಡಿನ ವಿಜಯ್ ಸೇಲ್ವಪುರಂ, ಮತನ್, ಶಿವಾ ಹಾಗೂ ಆಂದ್ರ ಪ್ರದೇಶದ ಶ್ರೀನಿವಾಸಲು ಕುಪ್ಪಮ್, ಚಂದಲು, ಬಾಳು ಮತ್ತು ನಾಗರಾಜ್ ಒಟ್ಟು ಏಳು

ಮಂದಿ ಚಾಲಾಕಿ ಕಳ್ಳರನ್ನು ಸುರಪುರ ಪೊಲೀಸರು ಅರೆಸ್ಟ್ ಮಾಡಿ ಆರೋಪಿತರಿಂದ 2 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಇನ್ನು ಎಸ್ಪಿ ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಸುರಪುರ ಠಾಣೆ ಪಿಐ ಸುನಿಲ್ ಮೂಲಿಮನಿ, ಕ್ರೈಮ್ ಪಿಎಸ್ಐ ಕೃಷ್ಣ ನಾಯಕ ಸುಬೇದಾರ್, ಪಿಎಸ್ ಐ ಚಂದ್ರಶೇಖರ ಹಾಗೂ ಸಿಬ್ಬಂದಿ ಭರ್ಜರಿ ಕಾರ್ಯಚರಣೆ ನಡೆಸಿ ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

Edited By : Nagesh Gaonkar
PublicNext

PublicNext

31/08/2021 10:20 pm

Cinque Terre

71.69 K

Cinque Terre

0