ಇನ್ನೂ ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ ಎಂದು ತಿಳಿದುಬಂದಿದೆ. ಕರುಣಾಸಾಗರ್ ತಾನು ಮದುವೆ ಆಗಬೇಕಿದ್ದ ಯುವತಿಯ ಜತೆಯಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಮಾತ್ರ ದುರಂತ.
ಮೃತ ಕರುಣಸಾಗರ್ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಪುತ್ರ. ನಿನ್ನೆ ಸಂಜೆ ಕಟ್ಟಡದ ಸಾಮಾಗ್ರಿಗಳನ್ನು ಖರೀದಿಸಲು ಕರುಣಾಸಾಗರ್ ಬೆಂಗಳೂರಿಗೆ ಆಡಿ ಕ್ಯೂ 3 ಕಾರಿನಲ್ಲಿ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯು ದುರಂತ ಅಂತ್ಯ ಕಂಡಿದ್ದಾರೆ.
ಕರುಣಾಸಾಗರ್, ಭಾವಿ ಪತ್ನಿ ಬಿಂದು,ಅಕ್ಷಯ್ ಗೋಯಲ್, ಇಶಿತಾ, ಧನುಷಾ, ರೋಹಿತ್, ಉತ್ಸವ್ ಮೃತ ದುರ್ದೈವಿಗಳು.
ವಿಪರ್ಯಾಸವೆಂದರೆ ಕರುಣಾಸಾಗರ್ ಹಾಗೂ ಮೃತ ಬಿಂದು ಇಬ್ಬರು ಪ್ರೀತಿ ಮಾಡ್ತಿದ್ರು. ಸದ್ಯದಲ್ಲೇ ಇಬ್ಬರಿಗೂ ಮದುವೆ ಮಾಡಲು ಕರುಣಾಸಾಗರ್ ಕುಟುಂಬಸ್ಥರು ಮುಂದಾಗಿತ್ತು. ಆದ್ರೆ ವಿಧಿಯಾಟವೇ ಬೇರೆಯಾಗಿದೆ.
ಇನ್ನು ದುಬಾರಿ ಬೆಲೆಯ ಕಾರು ಅಪಘಾತದ ವೇಳೆ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಎಲ್ಲರನ್ನು ಕಾಡತೊಡಗಿತ್ತು ಸದ್ಯ ಇದಕ್ಕೆ ಉತ್ತರ ಲಭಿಸಿದೆ.
ಈ ಕುರಿತಂತೆ ಮಾತನಾಡಿದ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆಡಿ ಕಾರು ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾರು ಕೂಡ ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಓಪನ್ ಆಗದ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಜರ್ಮನಿ ಮೂಲದ ಆಡಿ ಕಂಪನಿ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತದೆ. ಸಂಚಾರದ ಸಮಯದಲ್ಲಿ ಸೀಟ್ ಬೆಲ್ಟ್ ಹಾಕುವುದು ಕಡ್ಡಾಯ ಮಾಡಲಾಗಿದೆ.
PublicNext
31/08/2021 12:42 pm