ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ನಾಯಿ ಖರೀದಿಸಲು ಹೋಗಿ 66 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹಣ ಕಳೆದುಕೊಂಡ 50 ವರ್ಷದ ಮಹಿಳೆಯು ಡೆಹ್ರಾಡೂನ್ ಮೂಲದವರಾಗಿದ್ದು, ಮಗಳಿಗೆ ಜನ್ಮದಿನದಂದು ಉಡುಗೊರೆ ರೂಪದಲ್ಲಿ 15 ಸಾವಿರ ರೂ. ಮೌಲ್ಯದ ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನವನ್ನು ಖರೀದಿಸಲು ಮುಂದಾಗಿದ್ದರು. ಈ ವೇಳೆ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದು ಬಾಬಿ ಇಬ್ರಾಹಿಂ. ಇತ ತಾನು ಉತ್ತಮ ತಳಿಯ ನಾಯಿ ಕೊಡುವುದಾಗಿ ಹೇಳಿದ್ದಾನೆ. ನಂತರ ಸ್ವಲ್ಪ ಸ್ವಲ್ಪ ಹಣ ಪಡೆದುಕೊಂಡು ಪುಸಲಾಯಿಸಿ 66 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ.
ಈ ಸಂಬಂಧ ಮಹಿಳೆಯು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉತ್ತರಾಖಂಡ್ ಪೊಲೀಸರು ಡಿಂಗ್ ಬೋಗ್ಬಾ ಕ್ಲಾವ್ಸ್ ಅಲಿಯಾಸ್ ಬಾಬಿ ಇಬ್ರಾಹಿಂನನ್ನು ಬಂಧಿಸಿದ್ದಾರೆ. ಆತನಿಂದ ಮೊಬೈಲ್ ಫೋನ್, ಲ್ಯಾಪ್ಟಾಪ್, ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಬಿಯನ್ನು ಡೆಹ್ರಾಡೂನ್ಗೆ ಕರೆತರಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
PublicNext
26/08/2021 04:08 pm