ಬಳೆ ಮಾರಾಟ ಮಾಡುತ್ತಿದ್ದ 25 ವರ್ಷದ ಯುವಕನನ್ನು ಸಾರ್ವಜನಿಕರ ಎದುರೇ ಗುಂಪೊಂದು ಕ್ರೂರವಾಗಿ ಥಳಿಸಿದ್ದು, ಅವರ ಬಳಿಯಿದ್ದ 10,000 ರೂಗಳನ್ನು ಕಸಿದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ನಡೆದಿದೆ. ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಜನರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ನಂತರ ತಡರಾತ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
“ಹಲ್ಲೆಗೊಳಗಾದ ಯುವಕ ತನ್ನ ವ್ಯಾಪಾರಕ್ಕಾಗಿ ಸುಳ್ಳು ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಜನರ ಅರಿವಿಗೆ ಬಂದದ್ದರಿಂದ ಅವರ ಮೇಲೆ ದಾಳಿ ನಡೆದಿದೆ” ಎಂದು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪೊಲೀಸ್ ತನಿಖೆಯನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ. ಘಟನೆಗೆ ಕೋಮು ಬಣ್ಣ ನೀಡಬಾರದು ಎಂದು ಅವರು ತಿಳಿಸಿದ್ದಾರೆ.
PublicNext
23/08/2021 06:32 pm