ಚಂಡೀಗಡ : ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಬ್ಬದ ವಾತಾವರಣವಿದೆ. ಈ ವೇಳೆ ಪಂಜಾಬಿನ ಹೊಲವೊಂದರಲ್ಲಿ ಪಾಕಿಸ್ತಾನದ ಬಾವುಟಗಳು ಮತ್ತು ಐ ಲವ್ ಪಾಕಿಸ್ತಾನ್ ಎಂಬ ಬರಹ-ಚಿತ್ರಗಳುಳ್ಳ ಬಲೂನುಗಳು ದೊರೆತಿವೆ.
ಇಂದು ಮಧ್ಯಾಹ್ನ ದಿಢೀರನೇ ಪ್ರತ್ಯಕ್ಷವಾದ ಈ ಬಲೂನುಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಂಜಾಬಿನ ರೂಪನಗರ ಜಿಲ್ಲೆಯ ಸಾಂಡೋಯ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಬಲೂನುಗಳು ಹತ್ತಿರದ ಜಾಗದಿಂದ ಹಾರಿಕೊಂಡು ಬಂದಿರುವ ಹಾಗಿದೆ. ಎಲ್ಲಾ ಆ್ಯಂಗಲ್ ಗಳಲ್ಲೂ ತನಿಖೆ ನಡೆಸುತ್ತಿದ್ದೇವೆ” ಎಂದು ರೂಪ್ ನಗರದ ಎಸ್ ಎಸ್ಪಿ ಅಖಿಲ್ ಚೌಧರಿ ಹೇಳಿದ್ದಾರೆ.
PublicNext
15/08/2021 06:26 pm