ಚಿತ್ರದುರ್ಗ: ಕಳ್ಳರು ಕದ್ದ ಚಿನ್ನಾಭರಣ ಖರೀದಿಸಿದ ಆರೋಪದದಡಿ ಚಿನ್ನದಂಗಡಿ ವ್ಯಾಪಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.
ಹಿರಿಯೂರು ಪಟ್ಟಣದಲ್ಲಿರುವ ವಾಸವಿ ಜ್ಯೂವೆಲರ್ಸ್ ಮಾಲೀಕನ ಪುತ್ರ ವಿನಯ್ ಎಂಬ ವ್ಯಾಪಾರಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಖರೀದಿಸಿರುವ ಆರೋಪ ಕೇಳಿಬಂದಿತ್ತು. ಕಳ್ಳರು ಪೊಲೀಸರ ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಆರೋಪಿ ವಿನಯ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇಂದು ಬೆಂಗಳೂರಿನಿಂದ ಹಿರಿಯೂರಿಗೆ ಬಂದ ಸಿಸಿಬಿ ಪೊಲೀಸರು ವಾಸವಿ ಜ್ಯೂವೆಲ್ಲರಿ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಬಳಿಕ ವಿನಯ್‍ನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
PublicNext
12/08/2021 11:43 am