ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯದ ಅಮಲಿನಲ್ಲಿ ಬರ್ಬರ ಕೊಲೆ

ಬೆಂಗಳೂರು: ಎಣ್ಣೆ ಪಾರ್ಟಿಯಲ್ಲಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮಣಿ ಕೊಲೆಯಾದ ವ್ಯಕ್ತಿ. ಮಣಿ ಪರಿಚಿತನ ಜೊತೆ ಎಣ್ಣೆ ಪಾರ್ಟಿ ಮಾಡಿರುವುದು ಈ ಕೊಲೆಗೆ ಕಾರಣವಾಗಿದೆ. ಮಣಿ ಭಾನುವಾರ ರಾತ್ರಿ ತನ್ನ ಪರಿಚಿತನೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದು, ಈ ವೇಳೆ ಮೇಸ್ತ್ರಿ ಹಾಗೂ ಪರಿಚಿತನ ನಡುವೆ ಗಲಾಟೆ ನಡೆದಿದೆ. ಎಣ್ಣೆ ಅಮಲಿನಲ್ಲಿದ್ದ ಮೇಸ್ತ್ರಿಯ ಪರಿಚಿತ ಕೈಗೆ ಸಿಕ್ಕ ಮಾರಕಾಸ್ತ್ರದಿಂದ ಮೇಸ್ತ್ರಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಸೋಮವಾರ ಬೆಳಗ್ಗೆ ಬಂದ ಗಾರೆಕೆಲಸದ ಸಿಬ್ಬಂದಿ ನೋಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕೊಲೆಗಾರನ ಬಂಧನಕ್ಕೆ ಬಲೆ ಬೀಸಿದ್ದಾರೆ.

Edited By : Vijay Kumar
PublicNext

PublicNext

10/08/2021 07:50 am

Cinque Terre

63.28 K

Cinque Terre

4

ಸಂಬಂಧಿತ ಸುದ್ದಿ