ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಂಧನೂರಿನ ಬಾಂಗ್ಲಾ ಕ್ಯಾಂಪ್‌ನಲ್ಲಿ ಬಾಲಕನಿಂದ ಪ್ರೀತಿ ಕಿರುಕುಳ- ಬಾಲಕಿ ಆತ್ಮಹತ್ಯೆ

ರಾಯಚೂರು: ಪ್ರೀತಿಗಾಗಿ ಪೀಡಿಸುತ್ತಿದ್ದ ಬಾಲಕನ ನಿತ್ಯ ಕಿರುಕುಳ ತಾಳಲಾಗದೆ 14 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಸಿಂಧನೂರ ತಾಲೂಕಿನ ಬಾಂಗ್ಲಾ ಕ್ಯಾಂಪ್​ನಲ್ಲಿ ನಡೆದಿದೆ.

ಬಿನ್ನಿಮಯಿ ಬಿಸ್ವಾಸ (17) ಎಂಬ ಬಾಲಕ ಕಿರುಕುಳದಿಂದ ತಮನ್ನ (14) ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕಿ ತಮನ್ನ ತನ್ನ ಅಜ್ಜನ ಮನೆಗೆ ಹೊಗುವಾಗೆಲ್ಲ ಆಕೆಯನ್ನು ಹಿಂಬಾಲಿಸಿ ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಮದುವೆಯಾಗುವಂತೆ ಪೀಡಿಸುತ್ತಿದ್ದ. ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ನಿನ್ನನ್ನು ಕಿಡ್ನ್ಯಾಪ್ ಮಾಡುತ್ತೀನಿ ಎಂದು ಬಾಲಕ, ಬಾಲಕಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಬಾಲಕಿ ಪೋಷಕರನ್ನ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಇದರಿಂದ ರೋಸಿ ಹೋಗಿದ್ದ ಬಾಲಕಿ ಮನೆಯಲ್ಲಿದ್ದ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದಕ್ಕೆಲ್ಲ ತಮನ್ನ ಪೋಷಕರ ಸೈಟ್ ಮೇಲೆ ಕಣ್ಣಿಟ್ಟಿದ್ದ ಶೃತಿ ಎಂಬ ಮಹಿಳೆ ಕಾರಣವೆಂದು ಕೆಲವರು ಆರೋಪಿಸುತ್ತಿದ್ದಾರೆ. ತಮನ್ನ ಪೋಷಕರಿಗೆ ಸೇರಿದ ಸೈಟ್ ತನಗೆ ಮಾರದಿದದ್ದಕ್ಕೆ ಶೃತಿ ಎಂಬ ಮಹಿಳೆ ಬಿನ್ನಿಮಯಿ ಎಂಬ ಬಾಲಕನನ್ನು ಬಾಲಕಿ ಹಿಂದೆ ಬಿಟ್ಟು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬಾಲಕ ಬಿನ್ನಿಮಯಿ ಮತ್ತು ಶೃತಿ ವಿರುದ್ಧ ಸಿಂಧನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವಿಚಾರಣೆ ಬಳಿಕವಷ್ಟೇ ಸತ್ಯ ಹೊರ ಬೀಳಲಿದೆ.

Edited By : Vijay Kumar
PublicNext

PublicNext

09/08/2021 06:27 pm

Cinque Terre

50.1 K

Cinque Terre

1