ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚ್ಛೇದನ ನೀಡಿದ ಬಳಿಕ ಪತ್ನಿಯನ್ನು ಇರಿದು ಕೊಂದ ಮಾಜಿ ಪತಿ..

ಅವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ವಿಚ್ಛೇದನದ ಬಳಿಕ ಪತ್ನಿ ಬೇರೊಬ್ಬ ಪುರುಷನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಮಾಜಿ ಪತಿ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಅಜಯ್ ಕುಮಾರ್ ಮತ್ತು ಹೇಮಾ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಅಜಯ್ ನ ವರ್ತನೆಯಿಂದ ರೋಸಿ ಹೋಗಿದ್ದ ಹೇಮಾಗೆ ಮಹೇಶ್ ಠಾಕೂರ್ ಎಂಬ ಯುವಕನ ಪರಿಚಯವಾಗಿ, ಸ್ನೇಹ ಬೆಳೆದಿದೆ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ. ಹೀಗಾಗಿ ಹೇಮಾ ತನ್ನ ಪತಿ ಅಜಯ್ ಠಾಕೂರ್ ಗೆ ವಿಚ್ಛೇದನ ನೀಡಿದಳು. ಅಲ್ಲದೆ, ಇಬ್ಬರು ಮಕ್ಕಳನ್ನು ಗಂಡನ ಸುಪರ್ದಿಗೆ ಬಿಟ್ಟ, ಮಹೇಶ್ ಠಾಕೂರ್ನನ್ನು ಮದುವೆಯಾದಳು. ಪತ್ನಿ ಬಿಟ್ಟು ಹೋದ ದಿನದಿಂದ ಅಜಯ್ ಠಾಕೂರ್ ಖಿನ್ನತೆಯಿಂದ ಬಳಲುತ್ತಿದ್ದನು. ಅಂತಿಮವಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ.

Edited By : Nirmala Aralikatti
PublicNext

PublicNext

07/08/2021 09:31 am

Cinque Terre

56.28 K

Cinque Terre

5