ಮುಂಬೈ: ಅಲೇಲೇ ಇದು ಸಿನಿಮಾ ಅಲ್ಲರೀ ಮಹಾರಾಷ್ಟ್ರದ ಪುಣೆಯ ಜನನಿಬಿಡ ತಿಲಕ್ ರಸ್ತೆಯಲ್ಲಿ ಕಂಡು ಬಂದ ದೃಶ್ಯ. ನೋಡ್ರಿ ನೋಡ್ರಿ ಎಣ್ಣೆ ಗುಂಗಲ್ಲಿ ಅಕ್ಕಾ ರಸ್ತೆಮ್ಯಾಲೆ ಬಿದ್ದ ಹೆಂಗ ಉಳ್ಳಾಡಳ್ತಾಳ ಅಂತ.
ಯುವತಿಯು ಜನನಿಬಿಡ ರಸ್ತೆಯಲ್ಲಿ ಮಲಗಿಕೊಂಡು, ಪ್ರಯಾಣಿಕರಿಗೆ ಕಿರಿಕಿರಿ ಮಾಡಿ ಕೆಲಹೊತ್ತು ಟ್ರಾಫಿಕ್ಗೆ ಜಾಮ್ ಉಂಟು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಖಡಕ್ ವಾಸ್ಲಾ ಪ್ರದೇಶದಿಂದ ಹೀರಾಬಾಗ್‌ಗೆ ಬರುತ್ತಿದ್ದಳು.
ಆದರೆ ಕುಡಿದ ಅಮಲಿನಲ್ಲಿ ಕೆಲ ಹೊತ್ತು ರಸ್ತೆಯ ಮೇಲೆ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಳು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಯುವತಿ ಪರಾರಿಯಾಗಿದ್ದಾಳೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಬಾಳಾಸಾಹೇಬ್ ಕೊಪ್ನಾರ್ ಹೇಳಿದ್ದಾರೆ.
PublicNext
05/08/2021 02:21 pm