ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹಿರಂಗವಾದ ಖಾಸಗಿ ಫೋಟೋಗಳು: ಸಿಡಿದೆದ್ದ ದಿವ್ಯಾ ಉರುಡುಗ

ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ದಿವ್ಯಾ ಉರುಡುಗ ಅಲ್ಲಿಂದಲೇ ಸುದ್ದಿಯಲ್ಲಿದ್ದಾರೆ. ಆದರೆ ಬಿಗ್ ಬಾಸ್ ಮನೆಯಾಚೆಗೂ ಅವರ ಬಗ್ಗೆ ರೋಚಕ ಸುದ್ದಿಯೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬರ ಜೊತೆ ಕಿಸ್ ಮತ್ತು ಹಗ್ ಮಾಡಿರುವ ಅವರ ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ದಿವ್ಯಾ ಉರುಡುಗ ಕೆಂಡಾಮಂಡಲವಾಗಿದ್ದಾರೆ. ತಮ್ಮ ಖಾಸಗೀ ಜೀವನದ ಫೋಟೋಗಳನ್ನು ಲೀಕ್ ಮಾಡಿದ ಕಿಡಿಗೇಡಿಗಳ ವಿರುದ್ಧ ದಿವ್ಯಾ ಕಿಡಿಕಾರಿದ್ದಾರೆ. ಸದ್ಯ ಬಿಗ್ ಬಾಸ್ ಫಿನಾಲೆ ಹಂತದಲ್ಲಿದೆ. ಇದೇ ಹೊತ್ತಲ್ಲಿ ಅವರ ಫೋಟೋಗಳು ಹರಿದಾಡುತ್ತಿವೆ.

ದಿವ್ಯಾ ಉರುಡುಗ ವೈಯಕ್ತಿಕ ಚಿತ್ರಗಳನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದಿವ್ಯಾ ಉರುಡುಗ ಪರವಾಗಿ ಅವರ ಮನೆಯವರು ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದ್ದು ಈ ಚಿತ್ರಗಳನ್ನು ಲೀಕ್ ಮಾಡಿದವರ ವಿರುದ್ಧ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕೆಂದು ದಿವ್ಯಾ ಉರುಡುಗ ಮನೆಯವರು ಮನವಿ ಮಾಡಿದರು.

Edited By : Nagaraj Tulugeri
PublicNext

PublicNext

02/08/2021 07:26 am

Cinque Terre

63.45 K

Cinque Terre

14