ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗು ಕದ್ದು ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮಹಿಳೆ

ಹಿರಿಯೂರು: ನಗರದ ಸಂತೆಪೇಟೆ ಬಳಿಯಿರುವ ಕಟುಗರಹಳ್ಳ ಬಡಾವಣೆಯಲ್ಲಿ ಶನಿವಾರ ಬೆಳಿಗ್ಗೆ ಮನೆ ಹೊರಗಡೆ ಆಟವಾಡುವಾಗ ಕಣ್ಮರೆಯಾಗಿದ್ದ ಮೂರುವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ .

ಅನು ಎಂಬ ಹೆಣ್ಣು ಮಗುವಿಗೆ ಅಪರಚಿತ ಮಹಿಳೆಯೊಬ್ಬಳು ಚಾಕ್ಲೇಟ್ ಬಿಸ್ಕೆಟ್ ಕೊಡಿಸುವ ಆಸೆ ತೋರಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿರುತ್ತಾಳೆ . ನಗರದ ದುರ್ಗಿಗುಡಿ ರಸ್ತೆಯ ಅಂಗಡಿಯೊಂದರಲ್ಲಿ ಬಿಸ್ಕೆಟ್ ಖರೀದಿಸುತ್ತಿದ್ದ ಸಂದರ್ಭದಲ್ಲಿ ಮಗುವಿನ ಪೋಷಕರಿಗೆ ಪರಿಚಯ ಇರುವರು ನೋಡಿ ಪೋಷಕರಿಗೆ ಸುದ್ದಿ ತಿಳಿಸಿ, ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮಗುವನ್ನು ಅಪಹರಿಸಿದ ಮಹಿಳೆ ತಾಲೂಕಿನ ಭೀಮನ ಬಂಡೆ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಮಗುವನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.

ಮಗುವಿನ ತಾಯಿ ಹೆಸರು ಸುಶೀಲಮ್ಮ, ತಂದೆ ಹೆಸರು ಯತೀಶ್ ಎಂದು ತಿಳಿದು ಬಂದಿದೆ.ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Nirmala Aralikatti
PublicNext

PublicNext

01/08/2021 11:32 am

Cinque Terre

55.82 K

Cinque Terre

3

ಸಂಬಂಧಿತ ಸುದ್ದಿ