ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಣಿಚೀಲ ಖರೀದಿಸಲು ಮುಂದಾದ ಶಿಕ್ಷಕನಿಗೆ 1.13 ಲಕ್ಷ ರೂ. ಪಂಗನಾಮ!

ಶಿವಮೊಗ್ಗ: ಆನ್ ಲೈನ್ ನಲ್ಲಿ ಗೋಣಿ ಚೀಲ ಖರೀದಿಸಲು ಮುಂದಾದ ಶಿಕ್ಷಕರೊಬ್ಬರು ಬರೋಬ್ಬರಿ 1.13 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಶಿಕ್ಷಕ ಗೋಣಿಚೀಲ ಖರೀದಿಗಾಗಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ ಟ್ರೇಡಿಂಗ್ ವೆಬ್ ಸೈಟ್ ಸಿಕ್ಕಿದೆ. ಇವರು ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏಪ್ರಿಲ್ 11ರಂದು ಆ ಇ-ಮೇಲ್ ಗೆ ಪ್ರತಿಕ್ರಿಯೆ ಬಂದಿತ್ತು. ಇ ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ. ಆತ ವಾಟ್ಸ್ ಆ್ಯಪ್ ನಂಬರ್ ಪಡೆದಿದ್ದು, ಬಳಿಕ ಇಬ್ಬರೂ ವಾಟ್ಸ್ ಆ್ಯಪ್ ಮೂಲಕ ವ್ಯವಹಾರದ ಬಗ್ಗೆ ಚರ್ಚಿಸಿದ್ದರು.

26 ಟನ್ ಖಾಲಿ ಚೀಲ ಬೇಕಿದೆ ಎಂದಿದಕ್ಕೆ ಚೀಲಗಳ ಖರೀದಿಗೆ ಮುನ್ನ ಅರ್ಧದಷ್ಟು ಹಣವನ್ನು ಮುಂಗಡವಾಗಿ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ ದೆಹಲಿಯ ಬ್ಯಾಂಕ್ ಖಾತೆಯೊಂದಕ್ಕೆ 1,13,720 ರೂಪಾಯಿ ಆನ್ ಲೈನ್ ಮೂಲಕ ಶಿಕ್ಷಕ ಜಮೆ ಮಾಡಿದ್ದರು. ಆನಂತರ ಆತ ವಾಹನದ ಸಾಗಾಣಿಕೆ ವೆಚ್ಚವಾಗಿ ಮತ್ತಷ್ಟು ಹಣ ಸಂದಾಯ ಮಾಡುವಂತೆ ಸೂಚಿಸಿದ್ದು ಅನುಮಾನಗೊಂಡ ಶಿಕ್ಷಕಿ ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Edited By : Nirmala Aralikatti
PublicNext

PublicNext

31/07/2021 10:20 pm

Cinque Terre

76.82 K

Cinque Terre

5