ಬೆಂಗಳೂರು: ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹದೇವ ಬಿದರಿ ಅವರ ಇ-ಮೇಲ್ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಿದರಿ ದೂರು ನೀಡಿದ್ದಾರೆ.
ನನ್ನ ಇ-ಮೇಲ್ ಐಡಿಯನ್ನು ಅಪರಿಚಿತರು ಹ್ಯಾಕ್ ಮಾಡಿ, ಇ- ಮೇಲ್ ಅಡ್ರೆಸ್ ನಲ್ಲಿದ್ದ ಸ್ನೇಹಿತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ಮತ್ತು ಐಎಫ್ ಎಸ್ ಸಿ ಕೋಡ್ ಕಳುಹಿಸಿದ್ದಾರೆ. ನಂತರ ಖಾತೆಗೆ ಹಣ ಜಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನೇ ಇ- ಮೇಲ್ ಕಳುಹಿಸಿರಬಹುದು ಎಂದು ನಂಬಿದ ನನ್ನ ಸ್ನೇಹಿತರೊಬ್ಬರು 25 ಸಾವಿರ ರೂ. ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಬಿದರಿ ಅವರು ಉಲ್ಲೇಖಿಸಿದ್ದಾರೆ.
PublicNext
28/02/2021 11:49 am