ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯರಾತ್ರಿ ಮಾಜಿ ಗೆಳತಿಯ ಭೇಟಿಗೆ ಹೋಗಿ ಪ್ರಾಣ ತೆತ್ತ

ಗಾಂಧಿನಗರ: ಮಧ್ಯರಾತ್ರಿ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋದ ವಿವಾಹಿತನೋರ್ವ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ರಾಜಕೋಟ್‌ನಲ್ಲಿ ನಡೆದಿದೆ.

ಉಜೈನ್ ಸಿಂಗ್ ಗೌತಮ್ (28) ಮೃತ ವ್ಯಕ್ತಿ. ಗೌತಮ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಕದ್ದು ಮುಚ್ಚಿ ಹಳೆಯ ಗೆಳತಿ ಜೊತೆ ಸಂಬಂಧ ಮುಂದುವರಿಸಿದ್ದ. ಫೆ.20 ರಂದು ರಾತ್ರಿ ಗೌತಮ್ ಮಾಜಿ ಪ್ರೇಯಸಿ ಮನೆಗೆ ತೆರಳಿ ರೂಮ್ ಸೇರಿದ್ದ. ಆದರೆ ಗದ್ದಲದಿಂದಾಗಿ ಎಚ್ಚರಗೊಂಡ ಅವಳ ಸಹೋದರ ಲೈಟ್ ಆನ್ ಮಾಡಿದ್ದ. ಇದರಿಂದ ಸಿಕ್ಕಿ ಬೀಳುವ ಭಯದಲ್ಲಿ ಗೌತಮ್ ಕತ್ತಲಿನಲ್ಲಿ ಓಡಲು ಶುರುಮಾಡಿದ. ಆದರೆ ಗಾಬರಿಯಲ್ಲಿದ್ದ ಗೌತಮ್ ನೆಲಬಾವಿ ಗಮನಿಸದೆ ಅದರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಇನ್ನು ಮದುವೆ ಮುಗಿಸಿಕೊಂಡು ಮನೆಗೆ ಮರಳಿದ ಗೌತಮ್ ಪತ್ನಿ, ಪತಿಯ ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾರನೇ ದಿನ ಮಾಜಿ ಸ್ನೇಹಿತೆಯ ಮನೆ ಸಮೀಪ ಗೌತಮ್ ಬೈಕ್ ಸಿಕ್ಕಿತ್ತು. ಬಳಿಕ ಸುತ್ತಮುತ್ತ ಹುಡುಕಿದಾಗ ಬಾವಿಯಲ್ಲಿ ಗೌತಮ್ ಮೃತದೇಹ ಪತ್ತೆಯಾಗಿದೆ.

Edited By : Vijay Kumar
PublicNext

PublicNext

27/02/2021 09:57 pm

Cinque Terre

97.58 K

Cinque Terre

1

ಸಂಬಂಧಿತ ಸುದ್ದಿ