ಗುಂಡಿನ ಮತ್ತೆ ಗಮ್ಮತ್ತು. ಅಳತೆ ಮೀರಿದರೆ ಆಪತ್ತು ಎಂಬ ಮಾತಿದೆ. ಗುಂಡು ಹಾಕಿದ ಗಂಡಸರು ಜಗತ್ತನ್ನೇ ಗೆಲ್ಲುತ್ತೇನೆ ಎಂದು ವೀರಾವೇಷ ತೋರುತ್ತಾರೆ. ಆದರೆ ಇಲ್ಲೊಬ್ಬ ಮಹಾ ಕುಡುಕ ಅಳೆಯನ ಪ್ರಾಣ ಪಕ್ಷಿಯನ್ನೇ ಹಾರಿಸಿದ್ದಾನೆ. ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದ ಈ ದುರಂತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮೀನಿನಲ್ಲಿ ನಿರ್ಮಿಸಲಾಗಿದ್ದ ವಾಟರ್ ಟ್ಯಾಂಕ್ ಮೇಲೆ ಇಬ್ಬರು ಮದ್ಯ ಸೇವಿಸುತ್ತಾ ಕುಳಿತಿದ್ದರು. ಈ ದೃಶ್ಯವನ್ನು ಇಬ್ಬರ ಪೈಕಿ ಓರ್ವನ ಅಳಿಯ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ವೇಳೆ ಅವರ ಬಳಿ ಇದ್ದ ಕಂಟ್ರಿ ಮೇಡ್ ಪಿಸ್ತೂಲನ್ನೂ ಹೊರತೆಗೆದಿದ್ದಾರೆ. ಪಿಸ್ತೂಲು ಹೊರತೆಗೆದ ವ್ಯಕ್ತಿ ಅದಕ್ಕೆ ಬುಲೆಟ್ ಹಾಕಿ ಅಳಿಯನಿಗೆ ಗುರಿ ಇಟ್ಟು ಶೂಟ್ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕ ಮೊಬೈಲ್ ಕೈಬಿಟ್ಟು ನೆಲಕ್ಕೆ ಉರುಳಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೂಟ್ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
PublicNext
27/02/2021 05:47 pm