ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿ ವಿರುದ್ಧ ಜಗಳ: ಬಿಡಿಸಲು ಹೋದ ಮಹಿಳೆಗೆ ಗರ್ಭಪಾತ

ಚಾಮರಾಜನಗರ: ಪತಿಯ ವಿರುದ್ದ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಗರ್ಭವತಿ ಪತ್ನಿ ಮೇಲೆ ಜಗಳಕ್ಕೆ ಬಂದವರು ಹಲ್ಲೆ ಮಾಡಿದ್ದಾರೆ. ಪರಿಣಾಮ ಆಕೆಗೆ ಗರ್ಭಪಾತವಾಗಿದೆ. ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಉತ್ತಂಬಳ್ಳಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಮಾದೇವಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮಾದೇವಿಯ ಗಂಡ ಸೋಮು ಜೊತೆಗೆ ಮಾದೇಶ್ ಹಾಗೂ ಇತರ ಸ್ನೇಹಿತರು ಜಗಳ ಮಾಡಿದ್ದಾರೆ. ಈ ವೇಳೆ ಪತಿಯನ್ನು ಜಗಳದಿಂದ ಬಿಡಿಸಲು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿ ಮುಂದಾಗಿದ್ದರು. ಇದೇ ಪತಿಯ ಸ್ನೇಹಿತರು ಮಾದೇವಿ ಮೇಲೆ ಹಲ್ಲೆ ಮಾಡಿದ್ದಾರೆ.

ಸದ್ಯ ಘಟನೆ ಕುರಿತಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಮಾದೇಶ ಹಾಗು ಸ್ನೇಹಿತರಾದ ಶಿವಣ್ಣ, ಗೋವಿಂದ ಎಂಬಾವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

27/02/2021 10:47 am

Cinque Terre

99.46 K

Cinque Terre

2