ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯ್‌ಪುರ: ವೈದ್ಯರ ಮೇಲೆ ಖಾಕಿ ದರ್ಪ..!

ರಾಯ್‌ಪುರ: ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ಗಾಗಿ ಸರದಿಯಲ್ಲಿ ನಿಲ್ಲಲು ನಿರಾಕರಿಸಿದ ಪೊಲೀಸ್‌ ಅಧಿಕಾರಿಯೊಬ್ಬ ವೈದ್ಯರ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಛತ್ತೀಸಗಡ ರಾಜಧಾನಿಯಲ್ಲಿ ನಡೆದಿದೆ.

ಪೊಲೀಸ್‌ ಅಧಿಕಾರಿ ಇಂದು ರಾಯ್‌ಪುರದ ಪಂಡಿತ್ ಜವಾಹರ್ ಲಾಲ್ ನೆಹರು ಸ್ಮಾರಕ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆ ಪಡೆಯಲು ಬಂದಿದ್ದ. ಈ ವೇಳೆ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ಗಾಗಿ ಸರದಿಯಲ್ಲಿ ನಿಲ್ಲಲು ನಿರಾಕರಿಸಿ ರೇಡಿಯಾಲಜಿ ವೈದ್ಯರ ಜೊತೆಗೆ ಇಳಿದಿದ್ದ. ಮಾತಿಗೆ ಮಾತು ಬೆಳೆದಿದ್ದರಿಂದ ಪೊಲೀಸ್‌ ಅಧಿಕಾರಿ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲದೆ ಒದೆಯಲು ಯತ್ನಿಸಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯರ ಮೇಲೆ ದರ್ಪ ಮೆರೆದ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

23/02/2021 01:22 pm

Cinque Terre

123.46 K

Cinque Terre

6

ಸಂಬಂಧಿತ ಸುದ್ದಿ