ಪಾಟ್ನಾ: ಗೆಳೆಯನೊಂದಿಗೆ ಪೊದೆಯಲ್ಲಿ ಕುಳಿತಿದ್ದ ಯುವತಿಗೆ ಪುರುಷರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಫೆಬ್ರವರಿ 20ರಂದು ಶಾಲೆಯ ಸಮವಸ್ತ್ರ ಧರಿಸಿದ್ದ ಯುವತಿ ಸ್ನೇಹಿತನೊಂದಿಗೆ ನಿರ್ಜನ ಪ್ರದೇಶದಲ್ಲಿ ಕುಳಿತಿದ್ದಳು. ಇದನ್ನು ಗುಂಪೊಂದು ನೋಡಿ ಅಲ್ಲಿಗೆ ಬಂದಿದೆ. ಬಳಿಕ ಇಬ್ಬರನ್ನೂ ಹಿಡಿದು ಸುತ್ತುವರೆದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಯುವತಿ ತನ್ನ ಮುಖ ಮುಚ್ಚಿಕೊಳ್ಳಲು ಬಿಡದೇ ಬಲವಂತವಾಗಿ ವಿಡಿಯೋ ಮಾಡಿದ್ದಾರೆ.
ಯುವತಿ ಪದೇ ಪದೇ ತನ್ನ ವಿಡಿಯೋವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡದಂತೆ ಕೋರಿದ್ದಾಳೆ. ಆದರೆ ಆರೋಪಿಗಳು ಮೊಬೈಲ್ ಹಿಡಿದು ವಿಡಿಯೋ ಮಾಡಿದ್ದಾರೆ. ಯುವತಿ ಎಷ್ಟೇ ಕೇಳಿಕೊಂಡರೂ ಕೈಬಿಡದ ಪುರುಷರು, ಆಕೆಯ ತಂದೆ-ತಾಯಿ, ವಿಳಾಸ ಕೇಳಿದ್ದಾರೆ. ಆಗ ಯುವತಿ ತಾನು ಫತೇಪುರದ ನಿವಾಸಿ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಯಾ ಎಸ್‌ಎಸ್‌ಪಿ ಆದಿತ್ಯ ಕುಮಾರ್, "ಅಮಾನವೀಯ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.
PublicNext
23/02/2021 11:55 am