ಜಮ್ಮು: ಇಂದು ದೇಶಕ್ಕೆ ಕರಾಳ ದಿನ ಕಳೆದ ಎರಡು ವರ್ಷಗಳ ಹಿಂದೆ ಅಂದ್ರೆ 2019 ರ ಫೆ.14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಭಾರತ 40 ವೀರ ಯೋಧರನ್ನು ಕಳೆದುಕೊಂಡು ಮಮ್ಮಲ ಮರುಗುತ್ತಿದೆ. ಇದರ ಮಧ್ಯೆ ಇಂದು ಜಮ್ಮುವಿನ ಬಸ್ ನಿಲ್ದಾಣದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
2019ರ ಫೆಬ್ರುವರಿ 14ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್–ಎ–ಮೊಹಮ್ಮದ್ ನಡೆಸಿದ ದಾಳಿಯಲ್ಲಿ ಸಿಆರ್ ಪಿಎಫ್ನ 40 ಯೋಧರು ಸಾವಿಗೀಡಾದರು. ಹುತಾತ್ಮ ಯೋಧರ ಬಲಿದಾನದ ಸ್ಮರಣೆಯ ದಿನವೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿದ್ದು, ಭದ್ರತಾ ಪಡೆಗಳು ಪರಿಶೀಲನೆ ನಡೆಸಿವೆ.
PublicNext
14/02/2021 02:56 pm