ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರ್ಭಿಣಿ ಪತ್ನಿಗೆ ರಕ್ತ ನೀಡಿದಾತನನ್ನೆ ರಕ್ತದ ಮಡುವಿಗೆ ತಳ್ಳಿದ ಕಿರಾತಕ

ಹೊಸದಿಲ್ಲಿ : ಕೃತಘ್ನತೆ ಹಾಗೂ ಕ್ರೌರ್ಯಕ್ಕೂ ಒಂದು ಮಿತಿ ಬೇಡವೆ? ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗರ್ಭಿಣಿ ಪತ್ನಿಗೆ ರಕ್ತ ನೀಡಿ ಜೀವದಾನ ಮಾಡಿದ್ದಾತನನ್ನೇ ಈ ರಾಕ್ಷಕ ಇರಿದು ಇರಿದು ಕೊಂದಿದ್ದಾನೆ. ಆದರೆ ಪ್ರತಿ ಬಾರಿ ಚಾಕು ಇರಿದಾಗಲೂ ರಿಂಕು ಬಾಯಿಂದ ಬಂದಿದ್ದು ಜೈ ಶ್ರೀರಾಮ್.

ಇಷ್ಟಕ್ಕೂ ಕೊಲೆಗೀಡಾದ ದಿಲ್ಲಿ ಮಂಗೋಲಪುರಿಯ ರಿಂಕು ಶರ್ಮಾ ಮಾಡಿದ ತಪ್ಪಾದರೂ ಏನು? ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಹೊರಟಿದ್ದು ಅಪರಾಧವೆ? ದೇಶದ ಮೂಲೆ ಮೂಲೆಗಳಲ್ಲಿ ಅನೇಕ ಮುಸ್ಲಿಂ ಬಾಂಧವರು ಮುಕ್ತ ಮನಸ್ಸಿನಿಂದ ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವಾಗ ದುರುಳರು ಈ ಪರಿ ವಿರೋಧಿಸಿ ಅಮಾನುಷವಾಗಿ ರಾಮಭಕ್ತನನ್ನು ಕೊಂದು ಹಾಕಿದ್ದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬಜರಂಗದಳದ ರಿಂಕು ಸ್ನೇಹಿತರು ಪ್ರಶ್ನಿಸಿದ್ದಾರೆ.

ಕಳೆದ ಒಂದೂವರೆ ವಷದ ಹಿಂದೆ, ಕೊಲೆ ಆರೋಪಿ ಮೊಹಮ್ಮದ ಇಸ್ಲಾಂ ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ರಕ್ತದ ಅಗತ್ಯವಿತ್ತು. ಅಂತಹ ಪರಿಸ್ಥಿತಿಯಲ್ಲಿ ರಿಂಕು ಎರಡು ಬಾರಿ ರಕ್ತ ನೀಡಿ ಜೀವ ಉಳಿಸಿದ್ದ. ಇಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಆರೋಪಿ ಸಹೋದರ ಶಾಕುರು ಎಂಬಾತನ ಕುಟುಂಬದವರಿಗೆ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದ.

“ನಾವು ಕಳೆದ ವರ್ಷದಿಂದ ಆರೋಪಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಾಮ್ ಮಂದಿರಕ್ಕಾಗಿ ಒಂದು ಸಣ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇದರಿಂದ ಅವರು ಕೋಪಗೊಂಡು ಆಗಾಗ ನಮ್ಮೊಂದಿಗೆ ಜಗಳವಾಡುತ್ತಿದ್ದರು. ಆದರೆ ನಾವು ಅವರನ್ನು ಕಡೆಗಣಿಸಿದ್ದೇವೆ. ನಾವು ಯಾವಾಗಲೂ ಒಳ್ಳೆಯ ನೆರೆಹೊರೆಯವರಾಗಿದ್ದೇವೆ ರಿಂಕು ಅವರ ಸಹೋದರ ಮನ್ನು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೊಹಮ್ಮದ್ ಇಸ್ಲಾಂ, ದನೀಶ್ ನಸರುದ್ದೀನ್, ದಿಲ್ಶಾನ ಇಸ್ಲಾಂ ಸೇರಿಂದತೆ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Edited By :
PublicNext

PublicNext

12/02/2021 02:10 pm

Cinque Terre

79.9 K

Cinque Terre

17

ಸಂಬಂಧಿತ ಸುದ್ದಿ