ನವದೆಹಲಿ: ಗಣರಾಜ್ಯೋತ್ಸವ ದಿನ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದ್ದ ಆರೋಪಿ ದೀಪ್ ಸಿಧು ಎಂಬಾತನನ್ನ ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಟ ಹಾಗೂ ಗಾಯಕನೂ ಆಗಿರುವ ಆರೋಪಿ ದೀಪಕ್ ಸಿಧು ಗಣರಾಜ್ಯೋತ್ಸವದಂದು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದ. ಹಾಗೂ ಅಲ್ಲಿಂದಲೇ ಫೇಸ್ ಬುಕ್ ಲೈವ್ ಮಾಡಿದ್ದ. ದೀಪಕ್ ಸಿಧು ಮಾಡಿದ ಕುಕೃತ್ಯದಿಂದಲೇ ನಮ್ಮ ಹೋರಾಟ ಹಾದಿ ತಪ್ಪಿತು ಎಂದು ರೈತ ಸಂಘಟನೆಗಳ ನಾಯಕರು ಆರೋಪ ಮಾಡಿದ್ದರು.
ನನ್ನನ್ನು ದೇಶದ್ರೋಹಿ ಎನ್ನಲಾಗಿದೆ. ನಾನು ರೈತರಿಗೆ ಬೆಂಬಲ ಕೊಟ್ಟು ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿದ್ದೆ. ನಾನು ಪಂಜಾಬ್ ಜನರಿಗಾಗಿ ಬಂದಿದ್ದೆ. ಆದ್ರೆ ರೈತ ಮುಖಂಡರು ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಬಂಧಿತ ಆರೋಪಿ ದೀಪಕ ಸಿಧು ಪ್ರತಿಕ್ರಿಯೆ ನೀಡಿದ್ದಾರೆ.
PublicNext
09/02/2021 10:38 am