ಪಾಲಕ್ಕಾಡ್: ಇತ್ತೀಚೆಗೆ ಪ್ರಾಂಶುಪಾಲ ಹಾಗೂ ಗೋಲ್ಡ್ ಮೆಡಲಿಸ್ಟ್ ದಂಪತಿ ಮೌಢ್ಯದ ಹೆಸರಿನಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಬಲಿಕೊಟ್ಟ ಪ್ರಕರಣ ಮಾಸುವ ಮುನ್ನ ಅಂಥದ್ದೇ ಮತ್ತೊಂದು ಹೃದಯ ವಿದ್ರಾವಕ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.
ಅಲ್ಹಾನನ್ನು ಮೆಚ್ಚಿಸುವುದಕ್ಕಾಗಿ ಗರ್ಭಿಣಿ ಹಾಗೂ ಶಿಕ್ಷಕಿಯೊಬ್ಬರು ತಮ್ಮ ಆರು ವರ್ಷದ ಮಗುವನ್ನು ಕೊಲೆ ಮಾಡಿದ್ದಾಳೆ! 30 ವರ್ಷದ ಮದರಸಾ ಶಿಕ್ಷಕಿ ಶಾಹಿದಾ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ತನ್ನ ಮಗನನ್ನು ಅಲ್ಲಾಹನಿಗೆ ಅರ್ಪಿಸಿದ್ದೇನೆ ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಮಹಿಳೆ ಹೇಳಿದ್ದಾಳೆ.
ಗಲ್ಫ್ ನಿಂದ ಹಿಂದಿರುಗಿದ ಪತಿ ಇನ್ನಿಬ್ಬರು ಗಂಡು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ. ಮಹಿಳೆಗೆ ಮೂವರು ಗಂಡು ಮಕ್ಕಳಿದ್ದು, ಪುನಃ ಗರ್ಭಿಣಿಯಾಗಿದ್ದಾರೆ. ತನ್ನ ಕೊನೆಯ ಮಗುವನ್ನು ಇವರು ಕೊಲೆ ಮಾಡಿದ್ದಾರೆ. ನಸುಕಿನಲ್ಲಿ ಮಗುವನ್ನು ಬಾತ್ ರೂಂಗೆ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಬಳಿಕ ಪಾಲಕ್ಕಾಡ್ ಎಮೆರ್ಜೆನ್ಸಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿ, ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ವಿಷಯ ಪಕ್ಕದ ಕೋಣೆಯಲ್ಲೇ ಮಲಗಿದ್ದ ಗಂಡ ಮತ್ತು ಇನ್ನಿಬ್ಬರು ಮಕ್ಕಳಿಗೆ ತಿಳಿದಿರಲಿಲ್ಲ.ಪೊಲೀಸರು ಬರುವ ವೇಳೆಗೆ ಮಗನ ಮೃತದೇಹ ಸ್ನಾನದ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೊಲೆ ಆರೋಪಿತೆ ಶಾಹಿದಾ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಕೆ ಅಲ್ಲಾಹನಿಗೆ ತ್ಯಾಹ ಮಾಡಲು ಈ ಕೊಲೆ ಮಾಡಿದ್ದಾಳೋ ಅಥವಾ ಬೇರೆ ಕಾರಣಕ್ಕೋ ಎಂಬುದನ್ನು ತನಿಖೆ ನಂತರವೇ ತಿಳಿಯಲಿದೆ ಎಂದು ಎಸ್ ಪಿ ಆರ್. ವಿಶ್ವನಾಥ್ ತಿಳಿಸಿದ್ದಾರೆ.
PublicNext
08/02/2021 01:11 pm