ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಳಕಲ್ ಸಜ್ಜನ ಆರ್ಕೇಡ್ ಬೆಂಕಿಗಾಹುತಿ : 10 ಕೋಟಿಗೂ ಹೆಚ್ಚು ಹಾನಿ

ಬಾಗಲಕೋಟೆ: ಸಾಂಪ್ರದಾಯಿಕ ರೇಷ್ಮೇ ಹಾಗೂ ಕಾಟನ್ ಸೀರೆಗಳ ಖ್ಯಾತಿಯ ಇಳಕಲ್ ನಗರದಲ್ಲಿ ಭಾನುವಾರ ತಡರಾತ್ರಿ ಭಾರೀ ಬೆಂಕಿಯ ಅನಾಹುತ ಉಂಟಾಗಿ ಸುಮಾರು 10 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ.

ವಾಣಿಜ್ಯ ಸಂಕೀರ್ಣ ಸಜ್ಜನ ಆರ್ಕೇಡ್ ನಲ್ಲಿ ಈ ದುರಂತ ಸಂಭವಿಸಿದ್ದು ಅಲ್ಲಿಯ ಇಳಕಲ್ ರೇಷ್ಮೆ ಸೀರೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಮೋರ್ ಸೂಪರ್ ಮಾರ್ಕೆಟ್, ಸಿಹಿ ತಿನಿಸಿನ ಮಳಿಗೆ ಸೇರಿದಂತೆ 20ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ತೀವ್ರವಾಗಿದ್ದ ಬೆಂಕಿಯ ಕೆನ್ನಾಲಿಗೆಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳದವರು ಹರಸಾಹಸಪಟ್ಟರು. ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ತಹಬದಿಗೆ ಬಂದಿದೆ. ಅದೃಷ್ಟವಶಾತ್ ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Edited By :
PublicNext

PublicNext

08/02/2021 09:57 am

Cinque Terre

80.83 K

Cinque Terre

0

ಸಂಬಂಧಿತ ಸುದ್ದಿ