ಬೆಳಗಾವಿ: ಕರ್ನಾಟಕದ ಟ್ರಕ್ ಚಾಲಕನ ಮೇಲೆ ಮಹಾರಾಷ್ಟ್ರದ ಸಾತಾರಾ ಬಳಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ಮೂಲದ ಟ್ರಕ್ ಚಾಲಕ ಗೋವಿಂದರಾಜು ಅವರ ಮೇಲೆ ಸಾತಾರಾ ಟೋಲ್ ಬಳಿ ಶುಕ್ರವಾರ ರಾತ್ರಿ 8 ಗಂಟೆಗೆ ಹಲ್ಲೆ ನಡೆದಿತ್ತು. ಈ ಸಂಬಂಧ ಮಹಾರಾಷ್ಟ್ರದ ಭೂಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿ ಚಾಲಕನ ಜೊತೆಗೆ ಕರ್ನಾಟಕದ ಪಿ.ಎಸ್.ಐ ಒಬ್ಬರನ್ನು ಶನಿವಾರ ಮರಳಿ ಸಾತಾರಾಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿ. ಭೂಂಜ್ ಪೊಲೀಸರಿಗೆ ದೂರು ನೀಡಲಾಯಿತು. ಚಾಲಕನ ದೂರಿನ ಮೇರೆಗೆ ನಾಲ್ಕು ಜನರನ್ನು ಶನಿವಾರ ಸಂಜೆ ಬಂಧಿಸಲಾಗಿದೆ.
PublicNext
06/02/2021 08:58 pm