ಹೈದರಾಬಾದ್: ಯುವತಿಯೊಬ್ಬಳ ಮೇಲೆ ಯುವಕನೋರ್ವ ಕೊಡಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
ಕಳೆದ ಸೋಮವಾರ ಈ ಘಟನೆ ನಡೆದಿದೆ. ರಾಹುಲ್ ಗೌಡ ಎಂಬಾತನೇ ಹಲ್ಲೆಗೆ ಯತ್ನಿಸಿದ ಯುವತಿ. ಏಕಾಏಕಿ ಯುವತಿಯ ಮನೆಗೆ ನುಗ್ಗಿದ ರಾಹುಲ್ ಕೊಡಲಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ತನ್ನನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವತಿ ರಾಹುಲ್ ವಿರುದ್ಧ ದೂರು ನೀಡಿದ್ದಳು. ಇದಕ್ಕೆ ಪ್ರತಿಯಾಗಿ ರಾಹುಲ್ ಗೌಡನಿಗೆ ಜೈಲು ಶಿಕ್ಷೆಯಾಗಿತ್ತು. ಜೈಲಿನಿಂದ ಹೊರಬಂದ ರಾಹುಲ್ ತಾನು ಸೆರೆವಾಸ ಅನುಭವಿಸಲು ಕಾರಣಳಾಗಿದ್ದಾಳೆ ಎಂಬ ಸೇಡಿಗೆ ಯುವತಿ ಮೇಲೆ ಕೊಡಲಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ಎಲ್ಲ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
04/02/2021 08:35 pm