ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಡುಗಿಗೆ ಅಡ್ರೆಸ್ ಹೇಳಿದ ಯುವಕನ ಕೊಂದರು..!

ಮಂಡ್ಯ: ಯುವತಿಗೆ ಆಕೆಯ ಪ್ರಿಯಕರ ಇರುವ ವಿಳಾಸ ತೋರಿಸಿಕೊಟ್ಟಿದ್ದಾನೆ‌ ಎಂಬ ಕಾರಣಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ. ಈ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಎಂಇಎಸ್ ಬಡಾವಣೆಯಲ್ಲಿ ನಡೆದಿದೆ.

ಶರತ್ ಎಂಬಾತನೇ ಕೊಲೆಯಾದ ಯುವಕ. ಲವ್ ಮಾಡಿದ ಹುಡುಗನೊಬ್ಬ ತನ್ನ ಲವರ್ ಗೆ ಕೈಕೊಟ್ಟಿದ್ದ‌. ಇತ್ತ ಲವ್ ದೋಖಾ ಅನುಭವಿಸಿದ ಯುವತಿ ತನ್ನ ಪ್ರಿಯತಮನ ಫೋಟೋ ಹಿಡಿದು ಮಳವಳ್ಳಿ ಪಟ್ಟಣದಲ್ಲಿ ಅವನ ಅಡ್ರೆಸ್ ಕೇಳುತ್ತ ಅಲೆಯುತ್ತಿದ್ದಳು.

ಈ ವೇಳೆ ಕೊಲೆಯಾದ ಶರತ್ ಎಂಬಾತ ಆ ಹುಡುಗಿಗೆ ಫೋಟೋದಲ್ಲಿದ್ದ ಯುವಕನ ಬಗ್ಗೆ ಮಾಹಿತಿ ನೀಡಿದ್ದೂ ಅಲ್ಲದೇ ಆತನ ವಿಳಾಸವನ್ನೂ ನೀಡಿದ್ದ.

ಇದರಿಂದ ಕುಪಿತಗೊಂಡ ನಾಲ್ವರು ದುಷ್ಕರ್ಮಿಗಳು ಶರತ್ ನನ್ನು ಅಪಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರಿಂದ ಕುಪಿತಗೊಂಡ ನಾಲ್ವರು ದುಷ್ಕರ್ಮಿಗಳು ಶರತ್ ನನ್ನು ಅಪಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

25/01/2021 06:20 pm

Cinque Terre

114.58 K

Cinque Terre

6