ಮುಂಬೈ: ಮಹಾರಾಷ್ಟ್ರದ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಟರ್ಮಿನಲ್ ಗೇಟ್ ಒಂದರೊಳಗಿನ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗಮನಾರ್ಹ ವಿಚಾರವೆಂದರೆ ಎಸ್‌ಐಐ ಆಕ್ಸ್‌ಫರ್ಡ್- ಅಸ್ಟ್ರಾಜೆನೆಕಾ ಕೊರೊನಾ ವೈರಸ್ ಲಸಿಕೆ - ಕೋವಿಶೀಲ್ಡ್ ತಯಾರಕ ಘಟಕವಾಗಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಂಜಾರಿ ಆವರಣದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳವು ಹರಸಾಹಸ ಬಡುತ್ತಿದೆ. ಆದಾಗ್ಯೂ ಇತ್ತೀಚಿನ ವರದಿಗಳ ಪ್ರಕಾರ ಎಸ್‌ಐಐನ ಟರ್ಮಿನಲ್ ಗೇಟ್ ಒಂದರೊಳಗೆ ಎಸ್‌ಇಜೆಡ್3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಬೆಂಕಿ ಉಲ್ಬಣಗೊಳ್ಳುತ್ತಿದೆ ಎಂದು ಹೇಳಲಾಗಿದೆ.
ಇದು ಕೋವಿಶೀಲ್ಟ್ ಲಸಿಕೆ ತಯಾರಿಕಾ ಘಟಕವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಇನ್ನೂ ಕೆಲ ಮಾಧ್ಯಮಗಳು, ಎಸ್‌ಐಐನಲ್ಲಿ ನಿರ್ಮಾಣ ಹಂತದಲ್ಲಿದ್ದ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಿವೆ. ಆದರೆ ಕೊರೊನಾ ವೈರಸ್ ಲಸಿಕೆ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಲಾಗುತ್ತಿದೆ.
PublicNext
21/01/2021 04:13 pm