ಲಂಡನ್: ಇಂಗ್ಲೆಂಡಿನ ಮರ್ಸೆಸೈಡ್ ಪಟ್ಟಣದ ಮನೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಕಾರ್ಯಾಚರಣೆ ವೇಳೆ ಮನೆಯ ಬಾತ್ ರೂಮ್ ಒಳ ಹೊಕ್ಕು ನೋಡಿದಾಗ ನಿಜಕ್ಕೂ ಶಾಕ್ ಕಾದಿತ್ತು. ಅಲ್ಲಿದ್ದದ್ದನ್ನು ನೋಡಿದ ಪೊಲೀಸರು ದಂಗಾಗಿದ್ದಾರೆ.
ಏನದು ಅಲ್ಲಿದ್ದದ್ದು? ಮುಂದೆ ಓದಿ..
ಕೌಟುಂಬಿಕ ಹಿಂಸೆ ಹಾಗೂ ಡ್ರೈವಿಂಗ್ ಅಪರಾಧದಲ್ಲಿ ಭಾಗಿಯಾಗಿದ್ದ 32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನನ್ನ ಹಿಡಿದು ಹಾಕೋದೇ ಅಲ್ಲಿನ ಪೊಲೀಸರಿಗೆ ತಲೆಬಿಸಿಯ ಮ್ಯಾಟರ್ ಆಗಿತ್ತು.
ಮಹತ್ವದ ಸುಳಿವು ಸಿಕ್ಕ ಕೂಡಲೇ ಈ ಅಪರಾಧಿಯ ಮನೆಗೆ ದಾಳಿ ನಡೆಸಿದ ಪೊಲೀಸರು ಬಾತ್ ರೂಮ್ ನಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಚಿಕ್ಕ ಬಾಗಿಲು ಕಂಡಿದೆ. ಚಾಕುವಿನ ಸಹಾಯದಿಂದ ಬಾಗಿಲು ತೆರೆದಾಗ ಅಲ್ಲಿಂದ ಪೊಲೀಸರಿಗೆ ಬೇಕಿದ್ದ ಅದೇ ವ್ಯಕ್ತಿ ತಲೆ ಇಣುಕಿದ್ದಾನೆ.
ಕೂಡಲೇ ಅಲ್ಲಿಂದ ಆತನ ಕೈ ಹಿಡಿದು ಹೊರಗೆಳೆದ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆತ ಅರೆಬೆತ್ತಲಾಗಿದ್ದ. ಈ ಬಾತ್ ರೂಮ್ ಕಾರ್ಯಾಚರಣೆಯ ಒಟ್ಟಾರೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡಿ ಇಂತವರೂ ಇರ್ತಾರೆ.
PublicNext
20/01/2021 03:40 pm