ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕರಿಂದ ಸೆಕ್ಯುರಿಟಿ ಮೇಲೆ ಹಲ್ಲೆ: ಹಣ ದೋಚಿ ಪರಾರಿ

ಬಳ್ಳಾರಿ : ನಗರದ ಸರ್ಕಾರಿ ವೀಕ್ಷಣಾಲಯದಲ್ಲಿದ್ದ ಇಬ್ಬರು ಬಾಲಕರು ಸೆಕ್ಯೂರಿಟಿ ಗಾರ್ಡ್ ಮೇಲೆ ರಾಡ್​ನಿಂದ ಹಲ್ಲೆ ಮಾಡಿ, ಹಣ, ಬೈಕ್ ದೋಚಿಕೊಂಡು ಪರಾರಿಯಾಗಿದ್ದಾರೆ. ವೀಕ್ಷಣಾಲಯದಲ್ಲಿದ್ದ ಸುಮಾರು 15 -17 ವರ್ಷದ ಹುಡುಗರು ರಾತ್ರಿ 12 ಗಂಟೆ ಸುಮಾರಿಗೆ ಜೋರು ಧ್ವನಿ‌ಯಲ್ಲಿ ಜಗಳ ಮಾಡುತ್ತಿದ್ದರಿಂದ, ಜಗಳ ನಿಲ್ಲಿಸಲು ಸೆಕ್ಯೂರಿಟಿ ಗಾರ್ಡ್ ರೆಹಮಾನ್ ಬಾಷಾ ಕಿಟಕಿಯಿಂದ ಹೇಳಿದ್ದಾರೆ. ಆದರೆ, ಇಬ್ಬರು ಹುಡುಗರು ಜಗಳ ನಿಲ್ಲಿಸಿಲ್ಲ, ನಂತರ ಸೆಕ್ಯೂರಿಟಿ ಗಾರ್ಡ್ ಅವರಿದ್ದ ಕೊಠಡಿ ಒಳಗೆ ಹೋಗಿ ಜಗಳ ನಿಲ್ಲಿಸಲು ಹೇಳಿದಾಗ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದದ್ದೂ ಅಲ್ಲದೇ ಹಲ್ಲೆ ಮಾಡಿದ್ದಾರೆ.

ಬಟ್ಟೆಯಿಂದ ಮಂಚಕ್ಕೆ ಕೈ ಕಾಲು ಕಟ್ಟಿ , ಶಬ್ದ ಮಾಡದಂತೆ ಬಾಯಿಗೆ ಬಟ್ಟೆ ತುರುಕಿ ಸೆಕ್ಯೂರಿಟಿ ಗಾರ್ಡ್ ನ‌ ಹತ್ತಿರ ಇದ್ದ 6,010 ರೂಪಾಯಿ, ಮೊಬೈಲ್, ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇಬ್ಬರ ಬಾಲಕರ ಬಗ್ಗೆ ಮಾಹಿತಿ ಪಡೆಯಲು ಪೋಷಕರಿಗೆ ಕೇಳಿದರೆ ಅವರು ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಸಿನಿಮೀಯ ಘಟನೆ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೈದ ಬಾಲಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagaraj Tulugeri
PublicNext

PublicNext

20/01/2021 12:12 pm

Cinque Terre

62.92 K

Cinque Terre

0