ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಬೂಲ್ ನಲ್ಲಿ ಗುಂಡಿಕ್ಕಿ ಮಹಿಳಾ ನ್ಯಾಯಮೂರ್ತಿಗಳ ಹತ್ಯೆ

ಕಾಬೂಲ್: ಇಬ್ಬರು ಅಫಘಾನ್ ಮಹಿಳಾ ನ್ಯಾಯಮೂರ್ತಿಗಳನ್ನು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿರುವ ಭಯಾನಕ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

ಇತ್ತೀಚೆಗೆ ಅಮೆರಿಕವು ಅಫ್ಘಾನಿಸ್ತಾನದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು 2,500ಕ್ಕೆ ಇಳಿಸುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ನ ಮಹಿಳಾ ನ್ಯಾಯಮೂರ್ತಿಗಳನ್ನು ಹತ್ಯೆಗೈಯಲಾಗಿದೆ.

'ನ್ಯಾಯಾಲಯದ ಕಾರಿನಲ್ಲಿ ಮಹಿಳಾ ನ್ಯಾಯಮೂರ್ತಿಗಳು ಕಚೇರಿಗೆ ಬರುತ್ತಿದ್ದಾಗ ಈ ದಾಳಿ ನಡೆದಿದೆ. ಇದರಿಂದಾಗಿ ನಾವು ಇಬ್ಬರು ನ್ಯಾಯಮೂರ್ತಿಗಳನ್ನು ಕಳೆದುಕೊಂಡಿದ್ದೇವೆ. ಈ ದಾಳಿಯಲ್ಲಿ ಕಾರು ಚಾಲಕನಿಗೆ ಗಾಯಗಳಾಗಿವೆ' ಎಂದು ಸುಪ್ರೀಂಕೋರ್ಟ್ ವಕ್ತಾರ ಅಹಮದ್ ಫಹೀಮ್ ಖವೀಮ್ ಮಾಹಿತಿ ನೀಡಿದರು.

ಅಲ್ಲಿನ ಸರ್ಕಾರ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ. ಆದರೂ ಕೆಲವು ತಿಂಗಳಿನಿಂದ ಅಫ್ಘಾನಿಸ್ತಾನದಲ್ಲಿ ಹಿಂಸಾತ್ಮಕ ದಾಳಿಗಳು ಹೆಚ್ಚಾಗಿವೆ. ವಿಶೇಷವಾಗಿ ಕಾಬೂಲ್ ನಲ್ಲಿ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.

Edited By : Nirmala Aralikatti
PublicNext

PublicNext

17/01/2021 02:14 pm

Cinque Terre

52.6 K

Cinque Terre

1