ನವದೆಹಲಿ: 13ರ ಬಾಲಕನ ಲಿಂಗ ಬದಲಿಸಿ ಆರು ಕಾಮುಕರು ಆತನ ಮೇಲೆ ಒಂದು ತಿಂಗಳು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ದೆಹಲಿಯ ಗೀತಾ ಕಾಲೋನಿಯಲ್ಲಿ ನಡೆದಿದೆ.
ಅಪ್ರಾಪ್ತ ಹುಡುಗ ಶುಭಮ್ (ಹೆಸರು ಬದಲಾಯಿಸಲಾಗಿದೆ) ದೆಹಲಿಯ ಲಕ್ಷ್ಮಿ ನಗರ ಪ್ರದೇಶದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಆರೋಪಿಗಳನ್ನು ಭೇಟಿಯಾಗಿದ್ದ. ಸಮಾರಂಭದಲ್ಲಿ ಆರೋಪಿ ಬಾಲಕನೊಂದಿಗೆ ಸ್ನೇಹ ಬೆಳೆಸಿ ಮತ್ತು ಅವನಿಗೆ ಮತ್ತೊಂದು ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಅವಕಾಶ ಕೊಡಿಸುವುದಾಗಿ ಹೇಳಿ ಮಾಂಡವಲಿಗೆ ಕರೆದೊಯ್ದಿದ್ದರು.
ಕಾರ್ಯಕ್ರಮದ ನಂತರ ಶುಭಮ್‌ಗೆ ಸ್ವಲ್ಪ ಹಣವನ್ನು ನೀಡಲಾಯಿತು. ಬಳಿಕ ಆರೋಪಿಗಳು ಅವನಿಗೆ ಮಾದಕ ವಸ್ತು ಸೇವಿಸುವಂತೆ ಒತ್ತಾಯಿಸಿದರು. ಅಷ್ಟೇ ಅಲ್ಲದೆ ಶುಭಮ್‌ಗೆ ಲಿಂಗ ಬದಲಾವಣೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಕಿರುಕುಳ ನೀಡಿದರು. ಶಸ್ತ್ರಚಿಕಿತ್ಸೆ ಬಳಿಕ ಆತನಿಗೆ ಹಾರ್ಮೋನ್ ಬೆಳವಣಿಗೆಗೆ ಔಷಧಿ ನೀಡಿ ಹುಡುಗಿಯಂತೆ ಕಾಣುವಂತೆ ಮಾಡಿದರು.
ಆರೋಪಿ ಮತ್ತು ಅವನ ಸ್ನೇಹಿತರು ಕಳೆದ ಒಂದು ತಿಂಗಳಿಂದ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಸೆಕ್ಸ್ ಗಾಗಿ ಗ್ರಾಹಕರನ್ನು ಕರೆತಂದರು. ಅಷ್ಟೇ ಅಲ್ಲದೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡಲು ಒತ್ತಾಯಿಸಿದರು ಎಂದು ಶುಭಮ್ ಆರೋಪಿಸಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಂತ್ರಸ್ತ ಬಾಲಕನನ್ನು ರಕ್ಷಿಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
PublicNext
15/01/2021 11:10 pm