ಕುಂದಗೋಳ: ಅತಿ ವೇಗವಾಗಿ ಬಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಪಾದಚಾರಿಯನ್ನು ಬಲಿ ಪಡೆದ ಘಟನೆ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಪಶಪತಿಹಾಳ ಗ್ರಾಮದ ನಿಂಗಪ್ಪ ನೀಲಪ್ಪ ಬೋಳಿ (34) ಮೃತ ಪಾದಚಾರಿ. ಲಕ್ಷ್ಮೇಶ್ವರ-ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಅತಿ ವೇಗವಾಗಿ ಬರುತ್ತಿದ್ದ ಕೆಎ 63 ಜೆ 5628 ಸಂಖ್ಯೆಯ ಬೈಕ್ ಪಶುಪತಿಹಾಳದ ಸಹಕಾರಿ ಸಂಘದ ಸೊಸೈಟಿ ಹತ್ತಿರ ಸವಾರನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆ ಮೇಲೆ ಹೊರಟಿದ್ದ ನಿಂಗಪ್ಪ ಅವರಿಗೆ ಬೈಕ್ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಪ್ರಕರಣದ ಕುರಿತು ಗುಡಗೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
09/01/2021 07:14 pm