ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ನ ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣದ ಬಳಿ ಇರುವ ಬಿಬಿಎಂಪಿಗೆ ಸೇರಿದ ಬಿಲ್ಡಿಂಗ್ನಲ್ಲಿ ಬಿಬಿಎಂಪಿ ಗುತ್ತಿಗೆದಾರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೈಯಾಲಿಕಾವಲ್ನ ನಿವಾಸಿ ಕೃಷ್ಣರಾಜ್ (61) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಕೃಷ್ಣರಾಜ್ ಯಾರು ಇಲ್ಲದ ವೇಳೆ ತಮ್ಮ ಬಳಿ ಇದ್ದ ಕೀಯಿಂದ ಬಿಲ್ಡಿಂಗ್ನ ಮೊದಲನೇ ಮಹಡಿಯ ರೂಮ್‌ಗೆ ಹೋಗಿದ್ದಾರೆ. ಬಳಿಕ ರೂಮ್ ಲಾಕ್ ಮಾಡಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಸೆಕ್ಯೂರಿಟಿ ರೂಮ್ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಕೃಷ್ಣರಾಜ್ ಬಿಬಿಎಂಪಿ ವತಿಯಿಂದ ಕಾಮಗಾರಿ ಬಾಕಿ ಬಿಲ್ ಬಾರದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಆರೋಪ ಕೇಲಿ ಬಂದಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
07/01/2021 06:07 pm