ಬೆಂಗಳೂರು: ಪಬ್‌ಜಿ ಗೇಮ್‌ಗಾಗಿ ತಂದೆಯನ್ನೇ ಕೊಲೆಗೈದಿದ್ದ ಆರೋಪಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ಹುಚ್ಚಾಟ ನಡೆಸಿದ್ದಾನೆ.
ಬೆಳಗಾವಿಯ ರಘುವೀರ್ ಬೆಂಗಳೂರಿನಲ್ಲಿ ಹುಚ್ಚಾಟ ನಡೆಸಿರುವ ಆರೋಪಿ. ಕಳೆದ ವರ್ಷ ರಘುವೀರ್ ಪಬ್‌ಜಿ ಆಡದಂತೆ ಬುದ್ಧಿ ಹೇಳಿದ ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದು ಜೈಲು ಸೇರಿದ್ದ. ಸದ್ಯ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದು, ದೊಮ್ಮಲೂರಿನ ಖಾಸಗಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮದ್ಯ ಕಂಡು, ಅಲ್ಲೇ ಕುಡಿದು ಟೈಟ್ ಆಗಿದ್ದಾನೆ. ಈ ವೇಳೆ ಬಂದ ಮನೆ ಕೆಲಸದಾಕಿಗೆ ರಘುವೀರ್ ಸಿಕ್ಕಿ ಬಿದ್ದಿದ್ದಾನೆ.
ಮನೆಯಲ್ಲಿದ್ದ ಚಿನ್ನದ ಲಾಕರ್ ಓಪನ್ ಮಾಡಿದ್ದರೂ ಸಹ ರಘುವೀರ್ ಚಿನ್ನವನ್ನು ಮುಟ್ಟಿಲ್ಲ. ಕೂಡಲೇ ಕೆಲಸದಾಕೆ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
07/01/2021 01:52 pm