ಬದೌನ್ (ಉತ್ತರ ಪ್ರದೇಶ) : ಕಾಮುಕರ ಅಟ್ಟಹಾಸಕ್ಕೆ, ಕ್ರೌರ್ಯತೆ ಮುಂದುವರದೇ ಇದೆ.
ಮನುಷ್ಯತ್ವವವನ್ನು ಮರೆತ ಮೃಗಗಳು ನಾಯಿಯಂತೆ ವರ್ತಿಸಿದ ಮಹಿಳೆಯೋರ್ವಳನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶ ಬದೌನ್ ನಲ್ಲಿ ನಡೆದಿದೆ.
ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಪ್ರಕರಣ ಯಾರು ಮರೆಯುವಂತಿಲ್ಲ.
ಥೇಟ್ ಇದೇ ಘಟನೆ ನೆನಪಿಸುವ ಅತ್ಯಾಚಾರ ಘಟನೆ ಬದೌನ್ ನಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಹೋಗಿ ಬರುವ ವೇಳೆ 50 ವರ್ಷದ ಮಹಿಳೆಯನ್ನು ಕಿಡ್ನಾಪ್ ಮಾಡಿ ದುರುಳರು ಅವಳ ಗುಪ್ತಾಂಗಕ್ಕೆ ರಾಡ್ ಹಾಕಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ.
ಸಂತ್ರಸ್ತೆಯ ಶವವನ್ನು ಮೂವರು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ಮಾಡಿದಾಗ ದಂಗಾಗಿ ಹೋಗಿದ್ದಾರೆ.
ಮರಣೋತ್ತರ ವರದಿಯ ಪ್ರಕಾರ, ಕಾಮುಕರು ಸಂತ್ರಸ್ತೆಯ ಶ್ವಾಸಕೋಶವನ್ನು ಹಾನಿಗೊಳಿಸಿದ್ದಾರೆ.
ಕಾಮುಕರು ಮಹಿಳೆ ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದದ್ದಲ್ಲದೆ ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಹಾನಿಗೊಳಿಸಿದ್ದಾರೆ.
ಹೀಗಾಗಿ ತೀವ್ರ ರಕ್ತಸ್ರಾವ ಹಾಗೂ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಪ್ರಕರಣದಲ್ಲಿ ಪೊಲೀಸರು ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿ ಮಹಂತ್ ಬಾಬಾ ಸತ್ಯನಾರಾಯಣನಿಗಾಗಿ ಶೋಧ ನಡೆಸಿದ್ದಾರೆ.
PublicNext
06/01/2021 03:11 pm