ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆ ಎನ್ ಯು ಗಲಭೆಗೆ 1 ವರ್ಷ: ಆರೋಪಿಗಳ ಬಂಧನ ಇಲ್ಲ

ನವದೆಹಲಿ: ಕಳೆದ ವರ್ಷ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಗಲಭೆ ಹಾಗೂ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೂಲಗಳ ಪ್ರಕಾರ ಇದುವರೆಗೆ ಯಾವುದೇ ಆರೋಪಿಯ ಬಂಧನವಾಗಿಲ್ಲ. ದೆಹಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್‌ನ ವಿಶೇಷ ತನಿಖಾ ದಳ 15 ಆರೋಪಿಗಳನ್ನು (ಎಲ್ಲರೂ ವಿದ್ಯಾರ್ಥಿಗಳೇ) ಗುರುತಿಸಿದೆ. ಆದರೆ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ಮನೆಗೆ ಮರಳಿದ ನಂತರ ತನಿಖೆ ಸ್ಥಗಿತಗೊಂಡಿತು.

ಒಂದೂ ಬಂಧನವಿಲ್ಲ, ಚಾರ್ಜ್‌ಶೀಟೂ ಇಲ್ಲ, ವಿಶ್ವವಿದ್ಯಾಲಯದ ಆಂತರಿಕ ತನಿಖೆಯನ್ನು ನಿಲ್ಲಿಸಲಾಗಿದೆ ಕೂಡ! ಮುಖಗವಸು (ಮಾಸ್ಕ್) ಹಾಕಿಕೊಂಡು JNU ಕ್ಯಾಂಪಸ್‌ನಲ್ಲಿ ಪುಂಡರು ದಾಂಧಲೆ ಮಾಡಿ ಇಂದಿಗೆ ವರ್ಷವಾದರೂ ತನಿಖೆಯಲ್ಲಿ ಏನೇನೂ ಪ್ರಗತಿಯಾಗಿಲ್ಲ.

ಕಳೆದ ವರ್ಷ ಸುಮಾರು 100 ಜನರ ಮಾಸ್ಕ್‌ಧಾರಿಗಳ ತಂಡವೊಂದು ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ (JNU) ಸಿಕ್ಕಾಪಟ್ಟೆ ದಾಂಧಲೆ ಮಾಡಿ, 36 ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರ ಸಿಬ್ಬಂದಿಯನ್ನು ಭೀಕರವಾಗಿ ಗಾಯಗೊಳಿಸಿದ್ದರು. ಇದಾದ ನಾಲ್ಕು ದಿನಗಳ ನಂತರ ಜನೆವರಿ 9 ರಂದು ದೆಹಲಿ ಪೊಲೀಸರು ಒಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಅಂದು 8 ಸಂಶಯಿತರನ್ನು (ಎಲ್ಲರೂ ವಿದ್ಯಾರ್ಥಿಗಳು) ಹೆಸರಿಸಿದ್ದ ಪೊಲೀಸರು ಅದರಲ್ಲಿ 7 ಜನ ಎಡಪಂಥೀಯ ಸಂಘಟನೆಗೆ ಸೇರಿದವರು ಎಂದು ಹೇಳಿದ್ದರು. ಇನ್ನಿಬ್ಬರು ಯಾವ ಸಂಘಟನೆ ಎಂದು ಹೇಳಿರಲಿಲ್ಲ.

Edited By : Nagaraj Tulugeri
PublicNext

PublicNext

05/01/2021 10:50 pm

Cinque Terre

75.26 K

Cinque Terre

4

ಸಂಬಂಧಿತ ಸುದ್ದಿ