ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ವಿಜಯೋತ್ಸವದ ವೇಳೆ ನಡೆದ ಘರ್ಷಣೆಯೊಂದರ ಸಂಬಂಧ ಪೊಲೀಸರ ವಶದಲ್ಲಿದ್ದ ಮೂರು ವರ್ಷದ ಮಗುವೊಂದು ಅನುಮಾನಾಸ್ಪದ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿತ್ತು.
ಜೇವರ್ಗೀ ತಾಲೂಕಿನ ಜೈನಾಪುರ ಗ್ರಾಮದ ಈ ಬಾಲೆಯ ಸಾವು ಖಂಡಿಸಿ ತೀವ್ರವಾದ ಪ್ರತಿಭಟನೆಯೂ ನಡೆದಿತ್ತು.
ಈ ಸಂಬಂಧಿಸಿದಂತೆ ಜೇವರ್ಗಿಯ ಪಿಎಸ್ ಐ ಮಂಜುನಾಥ ಹೂಗಾರ ಅವರನ್ನು ಸೋಮವಾರ ಅಮಾನತು ಮಾಡಲಾಗಿದೆ.
ಮಂಜುನಾಥ ಹೂಗಾರ ಅವರ ಅಮಾನತಿಗೆ ಆಗ್ರಹಿಸಿ ಮಗುವಿನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶಾಸಕ ಅಜಯ್ ಸಿಂಗ್ ನೇತೃತ್ವದಲ್ಲಿ ಎಸ್ ಪಿ ಕಚೇರಿ ಮುಂದೆ ಭಾನುವಾರ ಅಹೋರಾತ್ರಿ ಧರಣಿ ಕುಳಿತಿದ್ದರು.
ಈ ವೇಳೆ ಶಾಸಕ ಅಜಯ್ ಸಿಂಗ್'ಗೆ ಫೋನ್ ಕರೆ ಮಾಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು 24 ಗಂಟೆಯೊಳಗೆ ಪಿಎಸ್ ಐ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಇದೀಗ ಪಿಎಸ್ ಐ ಮಂಜುನಾಥ್ ಅವರನ್ನು ಅಮಾನತು ಮಾಡಿ ಎಸ್ ಪಿ ಮರಿಯಮ್ ಚಾರ್ಜ್ ಆದೇಶ ಹೊರಡಿಸಿದ್ದಾರೆ.
PublicNext
05/01/2021 09:58 am