ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25 ಜನರ ಬಲಿ ಪಡೆದ ಸ್ಮಶಾನದ ಚಾವಣಿ ಕೇಸ್: ಎಂಜಿನಿಯರ್ ಸೇರಿ ಮೂವರು ಅರೆಸ್ಟ್

ಗಾಜಿಯಾಬಾದ್: ಉತ್ತರ ಪ್ರದೇಶ ಹಾಗೂ ದೆಹಲಿ ಗಡಿಭಾಗದಲ್ಲಿರುವ ಗಾಜಿಯಾಬಾದ್‌ನ ಮುರಾದ್ ನಗರದಲ್ಲಿರುವ ಸ್ಮಶಾನದಲ್ಲಿ ನಿನ್ನೆ ನಡೆದ ದುರಂತ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಅನಾಹುತದ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಜೂನಿಯರ್ ಎಂಜಿನಿಯರ್‌ ಸೇರಿದಂತೆ ಮೂವರನ್ನು ಇಂದು ಬಂಧಿಸಿದ್ದಾರೆ.

ಮುರಾದ್‌ನಗರದಲ್ಲಿನ ಸ್ಮಶಾನದ ಮೇಲ್ಛಾವಣಿ ಕುಸಿದು ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ‘ಮೃತರ ಸಂಬಂಧಿಕರಿಗೆ ತಲಾ ₹ 2ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Edited By : Vijay Kumar
PublicNext

PublicNext

04/01/2021 11:53 am

Cinque Terre

59.61 K

Cinque Terre

1

ಸಂಬಂಧಿತ ಸುದ್ದಿ