ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಫ್ಟ್ ಒಳಗೆ ಕಾಲಿಟ್ಟಾಗ ಜೀವವೇ ಲಿಫ್ಟ್ ಆಯ್ತು

ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ಲಿಫ್ಟ್ ದುರಂತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ.

ಕೊರ್ಲಗುಂಟಾ ಪಟ್ಟಣದ ಅಪಾರ್ಟ್ಮೆಂಟ್ ಒಂದರಲ್ಲಿ ಈ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ವಸಂತಿ ಎಂದು ಗುರುತಿಸಲಾಗಿದೆ‌. ಎಲೆವೇಟರ್ ಬರುವ ಮುನ್ನವೇ ನಾಲ್ಕನೇ ಮಹಡಿಯಲ್ಲಿ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ಲಿಫ್ಟ್ ಬಂದಿದೆ ಎಂದುಕೊಂಡು ಒಳಗೆ ಕಾಲಿಟ್ಟ ವಸಂತಾ ಅವರು ಸೀದಾ ಆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ವಸಂತಾ ಅವರ ಪತಿ ಸುರೇಂದ್ರ ರೆಡ್ಡಿ ದೂರು ದಾಖಲಿಸಿದ್ದಾರೆ. ಅಪಾರ್ಟ್ ಮೆಂಟ್ ಮಾಲೀಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

31/12/2020 08:15 pm

Cinque Terre

95.42 K

Cinque Terre

5

ಸಂಬಂಧಿತ ಸುದ್ದಿ