ಕಲಬುರಗಿ: ಟೀ ಅಂಗಡಿಯಲ್ಲಿ ರಾಜಕೀಯ ವಿಷಯದಲ್ಲಿ ನಡೆದ ಚರ್ಚೆಯ ವೇಳೆ ವ್ಯಕ್ತಿಯೋರ್ವನ ಕುತ್ತಿಗೆಗೆ ಚಾಕು ಹಾಕಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.
ಕೊಡ್ಲಾ ಗ್ರಾಮದ ನಿವಾಸಿ ಗುರುಲಿಂಗಪ್ಪ ಚಾಕುವಿನಿಂದ ಹಲ್ಲೆಗೆ ಒಳಗಾದ ವ್ಯಕ್ತಿ. ಗುರುಲಿಂಗಪ್ಪ ಅವರು ಗ್ರಾಮದ ಅಂಗಡಿಯೊಂದರ ಬಳಿ ಟೀ ಸೇವಿಸುತ್ತಾ ರಾಜಕೀಯ ವಿಷಯದಲ್ಲಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಅದೇ ಗ್ರಾಮದ ವೆಂಕಟರೆಡ್ಡಿ ಎಂಬಾತ ಗುರುಲಿಂಗಪ್ಪ ಅವರ ಕುತ್ತಿಗೆಗೆ ಚಾಕು ಹಾಕಿ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡ ಗುರುಲಿಂಗಪ್ಪ ಅವರನ್ನು ಕೂಡಲೇ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.
PublicNext
31/12/2020 08:23 am