ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಎಲ್ ಸಂತೋಷ್ ಹೆಸರಲ್ಲಿ ವಂಚನೆ: ಆರೋಪಿಗಳು ಅರೆಸ್ಟ್

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಹೆಸರಿನಲ್ಲಿ ಇತರರಿಗೆ ಮೋಸ ಮಾಡುತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ಬಲೆಗೆ ಕೆಡವಿದ್ದಾರೆ.

ಉತ್ತರ ಪ್ರದೇಶ ಮಥುರಾ ಜಿಲ್ಲೆಯ ಚೌಕಿ ಗ್ರಾಮದ ಇಬ್ರಾಹಿಂ(36) ಮೊಹಮ್ಮದ್ ಶೋಕಿನ್ (28) ಬಂಧಿತರಾಗಿದ್ದಾರೆ. ಬಂಧಿತರಿಂದ 5 ಮೊಬೈಲ್, 10 ಕ್ಕೂ ಅಧಿಕ ಸಿಮ್ ಕಾರ್ಡ್, ಹಾಗೂ ಬ್ಯಾಂಕ್ ಪಾಸ್‍ಬುಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಬಿ.ಎಲ್ ಸಂತೋಷ್ ಹೆಸರಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ತೆರೆದಿದ್ದರು. ನಂತರ ಫೇಸ್ಬುಕ್ ಮೆಸೇಂಜರ್ ಮೂಲಕ ಸಂತೋಷ್ ಹೆಸರಲ್ಲಿ ಹಣಸಂದಾಯ ಮಾಡುವಂತೆ ಅಜಿತ್ ಎನ್ನುವವರಿಗೆ ಮೆಸೇಜ್ ಮಾಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಆರೋಪಿಗಳು ಇದೇ ರೀತಿ ಹಣ ಕೋರಿ ಹಲವರಿಗೆ ಸಂದೇಶ ಕಳುಹಿಸಿ ವಂಚಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Edited By : Nagaraj Tulugeri
PublicNext

PublicNext

27/12/2020 04:42 pm

Cinque Terre

77.11 K

Cinque Terre

1

ಸಂಬಂಧಿತ ಸುದ್ದಿ