ಶ್ರೀನಗರ: ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು (ಮಿಲಿಟರಿ ಬ್ಯಾರಕ್) ಕುಸಿದು ಬಿದ್ದ ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದಿದೆ.
ಹುತಾತ್ಮ ಯೋಧರನ್ನು ಸೋನಿಪತ್‌ನ ಸುಬೇದಾರ್ ಎಸ್.ಎನ್.ಸಿಂಗ್ ಹಾಗೂ ಸಾಂಬಾದ ನಾಯಕ್ ಪರ್ವೇಝ್ ಕುಮಾರ್ ಎಂದು ಗುರುತಿಸಲಾಗಿದೆ. ಪಾಣಿಪತ್‌ನ ಯೋಧ ಸೆಪೊಯ್ ಮಂಗಲ್ ಸಿಂಗ್ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕತುವಾ ಜಿಲ್ಲಾ ಕೇಂದ್ರದಿಂದ 150 ಕಿ.ಮೀ ದೂರದ ಬಿಲ್ಲವರ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಚ್ಚೆಡಿ ಬ್ಯಾರಕ್ ನಿರ್ಮಾಣ ಕಾರ್ಯ ನಡೆದಿತ್ತು. ಯೋಧರು ಕೆಲಸ ಮಾಡುತ್ತಿದ್ದಾಗ ಗೋಡೆಯೊಂದು ಹಠಾತ್ತನೆ ಕುಸಿದು ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಎಸ್‌ಡಿಎಚ್ ಬಿಲ್ಲವರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಹುತಾತ್ಮರಾಗಿದ್ದಾರೆ.
PublicNext
26/12/2020 10:18 am