ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ನಿರ್ಭಯ ಯೋಜನೆ’ಯ 619 ಕೋ.ರೂ. ಬೃಹತ್ ಇ-ಟೆಂಡರ್ ಪ್ರಕ್ರಿಯೆಯ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಹಸ್ತಕ್ಷೇಪ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಪ್ರಮುಖ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ರೂಪಾ ಅವರು, ಜನರ ಹಣ ಮತ್ತು ಸರ್ಕಾರದ ಹಣ ಪೋಲಾಗಬಾರದೆಂದು ಕರೆಮಾಡಿದ್ದು ನಿಜ. ಇದರಲ್ಲಿ ಯಾವುದೇ ಹಿತಾಸಕ್ತಿಯೂ ಇರಲಿಲ್ಲ. ಬೆಂಗಳೂರು ಸುರಕ್ಷತೆ ಮತ್ತು ಸರ್ಕಾರದ ಹಣದ ಸುರಕ್ಷತೆಗಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿ ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಈ ರೀತಿ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
PublicNext
26/12/2020 09:13 am