ನವದೆಹಲಿ: ಚಾಲಾಕಿ ಕಳ್ಳರಿಬ್ಬರು ಮುನ್ಸಿಪಲ್ ಅಧಿಕಾರಿಗಳಂತೆ ಪೋಸ್ ಕೊಟ್ಟು ಕಾಲೋನಿಯೊಂದಕ್ಕೆ ನುಗ್ಗಿ ಅಲ್ಲಿದ್ದ, ಡೆಲಿವರಿ ಬಾಯ್‌ನ ಬೈಕ್ ಕದ್ದು, ಪರಾರಿಯಾಗುವ ಧಾವಂತದಲ್ಲಿ ಫಜೀತಿಗೆ ಈಡಾಗಿದ್ದಾರೆ..
ಹೌದು.. ಇಂತಹದೊಂದು ಘಟನೆ ದೆಹಲಿಯ ಕಲ್ಕಾಜಿ ಎಕ್ಸ್‌ಟೆನ್ಶನ್‌ನಲ್ಲಿರುವ ಎವರೆಸ್ಟ್ ಅಪಾರ್ಟ್‌ಮೆಂಟ್‌ನ ಅಂಗಳದಲ್ಲಿ ನಡೆದಿದೆ.
ಬೈಕ್ ಹಾರಿಸಿದ ಕಳ್ಳರು ಪರಾರಿಯಾಗುವ ವೇಳೆ, ಅಲ್ಲೆ ಇದ್ದ ಸೆಕ್ಯೂರಿಟಿ ಗಾರ್ಡ್ ಅದನ್ನ ಗಮನಿಸಿ, ಕೂಡಲೇ ಚಾಣಾಕ್ಷತನದಿಂದ ತಕ್ಷಣವೇ ಗೇಟ್ ಕ್ಲೋಸ್ ಮಾಡಿದ್ದಾರೆ. ಆಗ ವೇಗದಲ್ಲಿ ಪರಾರಿಯಾಗುತ್ತಿದ್ದ ಕಳ್ಳರು ಗೇಟ್‌ಗೆ ಢಿಕ್ಕಿ ಹೊಡೆದು ಗೇಟ್‌ನಲ್ಲೆ ಸಿಲುಕಿಕೊಂಡಿದ್ದನ್ನ ನೀವು ವಿಡಿಯೋದಲ್ಲಿ ನೋಡಬಹುದು..
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಟ್ವೀಟರ್‌ನಲ್ಲಿ ಎಲ್ಲೆಡೆ ವೈರಲ್ ಆಗಿದೆ. ಇನ್ನು ಈ ಬಗ್ಗೆ ನಿವಾಸಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸ್ ಪರಿಶೀಲನೆ ನಡೆಸಿದ್ದಾರೆ.
PublicNext
27/09/2022 08:10 pm