ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿಯ ಹಿಂದೆ ಪೊಲೀಸರು ಬಿದ್ದಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಹಿಡಿಯುವ ಸಲುವಾಗಿ ಹಿಂಬಾಲಿಸಿಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ಆ ವ್ಯಕ್ತಿ ಪೋಲಿಸರ ಕೈಗೆ ಸಿಕ್ಕಿಯೇ ಬಿದ್ದ ಎನ್ನುವ ಕ್ಷಣ ಕೂಡಾ ಬರುತ್ತದೆ.
ವಾಸ್ತವವಾಗಿ ಈ ವ್ಯಕ್ತಿಯಿಂದ ದಂಡ ವಸೂಲಿ ಮಾಡುವ ಸಲುವಾಗಿ ಪೊಲೀಸರು ಈತನನ್ನು ನಿಲ್ಲುವಂತೆ ಸೂಚಿಸುತ್ತಾರೆ. ಆದರೆ ಆ ವ್ಯಕ್ತಿ ಬೈಕ್‌ನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಬಿಡಬೇಕಲ್ಲ, ಹಿಂಬಾಲಿಸಿಕೊಂಡು ಬಂದಿದ್ದಾರೆ. ಇನ್ನೇನು ಪೋಲೀಸರ ಕೈಗೆ ಸಿಕ್ಕಿಯೇ ಬಿದ್ದ ಎಂದು ಕೊಳ್ಳಬೇಕು, ಅಷ್ಟರಲ್ಲಿ ಮಿಂಚಿನಂತೆ ಮತ್ತೆ ತಪ್ಪಿಸಿಕೊಳ್ಳುತ್ತಾನೆ.
ಘಂಟಾ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊ ಸದ್ಯ ವೈರಲ್ ಆಗುತ್ತಿದೆ.
PublicNext
07/06/2022 07:45 pm